• first
    second
    third
    previous arrow
    next arrow
  • ಕಾಯಿತ್ತಲಕೇರಿಯಲ್ಲಿ ರಾಮನಾಥ ಕಾಲಭೈರವ, ಮಹಾಸತಿ ದೇವರ ಪ್ರತಿಷ್ಠಾಪನೆ

    300x250 AD

    ಹೊನ್ನಾವರ : ತಾಲ್ಲೂಕಿನ ಕುದ್ರಿಗಿ ಗ್ರಾಮದ ಕಾಯಿತ್ತಲಕೇರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರಾಮನಾಥ ಕಾಲಭೈರವ ಮತ್ತು ಮಹಾಸತಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಂತೆ ಜರುಗಿತು.

    ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ತೀರ್ಥ ಪ್ರಸಾದ ವಿತರಣೆ ಜರುಗಿತು. ಪ್ರತಿದಿನವು ಆಗಮಿಸಿದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಕೊನೆಯ ದಿನದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಆಡಳಿತ ಮಂಡಳಿಯವರಿಂದ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

    300x250 AD

    ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀಧರ್ ಭಟ್ಟ,ತಾಲೂಕಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಈಶ್ವರ ನಾಯ್ಕ್, ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ವೈದ್ಯರ ಅಭಿಮಾನಿಗಳಾದ ನಾಗೇಶ್ ನಾಯ್ಕ ,ನಾಗರಾಜ್ ನಾಯ್ಕ್ ,ವಿವೇಕ್ ನಾಯ್ಕ ವಿನಾಯಕ ನಾಯ್ಕ ,ಗಿರೀಶ್ ನಾಯ್ಕ ,ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ,ಕಾರ್ಯದರ್ಶಿ ಹಾಗೂ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top