• Slide
    Slide
    Slide
    previous arrow
    next arrow
  • ಸಚಿವ ಈಶ್ವರಪ್ಪನವರ ದೇಶದ್ರೋಹಿ ಹೇಳಿಕೆ ಖಂಡಿಸಿ ಭಟ್ಕಳದಲ್ಲಿ ರಾಜ್ಯಪಾಲರಿಗೆ ಮನವಿ

    300x250 AD

    ಭಟ್ಕಳ: ಬಿಜೆ.ಪಿ.ಯ ಮುಖಂಡ ಈಶ್ವರಪ್ಪ ದೆಹಲಿಯಲ್ಲಿ ರಾಷ್ಟ್ರ ಧ್ವಜದ ಬದಲು ಕೇಸರಿ ದ್ವಜ ಹಾರಿಸುವೆ ಎಂದು ದೇಶದ್ರೋಹಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳೂವಂತೆ ಆಗ್ರಹಿಸಿ ಭಟ್ಕಳ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸೋಮವಾರದಂದು ಮದ್ಯಾಹ್ನ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು.

    ಕರ್ನಾಟಕ ಸರಕಾರದಲ್ಲಿ ಸಚಿವರಾಗಿರುವು ಕೆ.ಎಸ್. ಈಶ್ವರಪ್ಪನವರು ಇತ್ತೀಚಿಗೆ ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆಯನ್ನು ಕೊಟ್ಟಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಅಖಂಡತೆ, ಸಾರ್ವಬೌಮತೆ, ಅಸ್ಮಿತೆ ಮತ್ತು ಸಂವಿಧಾನಗಳ ಸಂಕೇತವಾಗಿದೆ. ಹಾಗಾಗಿ ಈಶ್ವರಪ್ಪನವರನ್ನು ತಕ್ಷಣವೆ ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ದ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿ ಕಾಂಗ್ರೇಸ್ ಪಕ್ಷದ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿಯನ್ನು ಮಾಡುತ್ತಿದ್ದಾರೆ.

    ರಾಷ್ಟ್ರಾಭಿಮಾನಿ ಜನ ದೆಶದ್ರೋಹದ ಹೇಳಿಕೆಗಳನ್ನು ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ವಿಚಾರಗಳನ್ನು ಮತ್ತು ರಾಷ್ಟ್ರ ಲಾಂಚನಗಳಿಗೆ ಅಪಮಾನವನ್ನು ಸಹಿಸಲಾಗುವುದಿಲ್ಲ ಮತ್ತು ಇಂತಹ ಘಟನೆಗಳೊಂದಿಗೆ ರಾಜಿ ಮಾಡಿಕೊಳ್ಳುವ ವಿಷಯವೆ ಇರುವುದಿಲ್ಲ. ಹೀಗಿರುವಾಗ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವ್ಯಕ್ತಿಯೊಬ್ಬ ರಾಜ್ಯದ ಸಚಿವನಾಗಿರುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಈಶ್ವರಪ್ಪನವರ ಹೇಳಕೆಯ ವಿರುಧ್ದ ಮತ್ತು ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ದ ಸೂಕ್ತ ಪ್ರಕರಣವನ್ನು ದಾಖಲಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    300x250 AD

    ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಮಾ ಮೊಗೇರ ಮತ್ತು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ ರಾಷ್ಟ್ರ ದ್ವಜ್ಕಕೆ ಅಪಮಾನ ಮಾಡಿದ ಈಶ್ವರಪ್ಪನವರನ್ನು ಸಂಪುಟದಿಂದª ಕಿತ್ತೊಗೆಯಬೇಕು ಹಾಗೂ ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಪ್ರಮುಖರಾದ ಅಬ್ದುಲ್ ಮಜೀದ್, ಟಿ.ಡಿ.ನಾಯ್ಕ, ಮಹಾಭಲೇಶ್ವರ ನಾಯ್ಕ,ನಾರಾಯಣ ನಾಯ್ಕ, ಜಯಲಕ್ಷೀ ಗೊಂಡ, ವೆಂಕ್ಟಯ್ಯ ಬೈರುಮನೆ, ವಿಷ್ಣು ದೇವಾಡಿಗ,ಸತೀಶ ಆಚಾರಿ, ಮಂಜುನಾತ ನಾಯ್ಕ, ರಮೇಶ ನಾಯ್ಕ, ಸೇರಿದಂತೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top