ಭಟ್ಕಳ: ಲಯನ್ಸ್ ಕ್ಲಬ್ ಮುರುಡೇಶ್ವರ ಹಾಗೂ ಆರ್. ಎನ್. ಎಸ್ ಪಾಲಿಟೆಕ್ನಿಕ್ ಮುರುಡೇಶ್ವರ ಇವರ ಸಹಯೋಗದಲ್ಲಿ ಜನತಾ ವಿದ್ಯಾಲಯ ಪ್ರೌಢಶಾಲೆ ಶಿರಾಲಿಯಲ್ಲಿ 10ನೇ ತರಗತಿ ಮಕ್ಕಳಿಗಾಗಿ ಎಸ್ ಎಸ್ ಎಲ್ ಸಿ ನಂತರ ಇರುವ ಅವಕಾಶಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಪಾಲಿಟೆಕ್ನಿಕ್ ಉಪ ಪ್ರಾಚಾರ್ಯರಾದ ಕೆ. ಮರಿಸ್ವಾಮಿ ಅವರು ನೀಡಿದರು.
ಪಾಲಕರು ತಮ್ಮ ಈಡೇರದ ಆಸೆ-ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಏರಿ ಅವರ ಆತ್ಮವಿಶ್ವಾಸ ಕುಗ್ಗಿಸದೆ ಅವರ ಅಭಿವೃದ್ಧಿಗೆ ಆಸಕ್ತಿಗೆ ತಕ್ಕಂತೆ ಮುಂದಿನ ಶಿಕ್ಷಣಕ್ಕೆ ಅನು ಮಾಡಿಕೊಡಿ ಎಂದು ತಿಳಿಸಿದರು ಹಾಗೂ ವಿವಿಧ ಶಿಕ್ಷಣ ಕ್ಷೇತ್ರ ಮತ್ತು ದೊರೆಯಲಿರುವ ವಿಪುಲ ಉದ್ಯೋಗಾವಕಾಶಗಳ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಮುರ್ಡೇಶ್ವರ ಇದರ ಅಧ್ಯಕ್ಷರಾದ ಶಿವಾನಂದ ದೈಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಭಟ್ ವಹಿಸಿದ್ದರು.
ಪ್ರಾರಂಭದಲ್ಲಿ ಶಿಕ್ಷಕಿ ಲೀಲಾವತಿ ಮೊಗೇರ್ ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರಾದ ಅರುಣ್ ಗೌಡ ವಂದನಾರ್ಪಣೆ ಮಾಡಿದರು.