ಸಿದ್ದಾಪುರ:ಯಕ್ಷಗಾನ ಕೇವಲ ಮನರಂಜನೆಗಾಗಿ ಇರುವ ಕಲೆಯಲ್ಲ. ಇದು ಬೋಧನೆಗೆ ಅರ್ಹವಾಗಿದೆ ಹಾಗೂ ಆರಾಧನಾ ಕಲೆಯಾಗಿದೆ. ಯಕ್ಷಗಾನ ರಾಜ್ಯದ ಕಲೆ ಆಗಿದೆ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು.
ತಾಲೂಕಿನ ಹೊಸಗದ್ದೆಯ ಪಿ.ವಿ.ಹೆಗಡೆ ಅವರ ಮನೆ ಅಂಗಳದಲ್ಲಿ ದೇವತಾರಾಧನೆ ಪ್ರಯುಕ್ತ ಡಿ.ಜಿ.ಹೆಗಡೆ ಮತ್ತಿಗಾರ ಅವರ ನೆನಪಿನ ವೇದಿಕೆಯಲ್ಲಿ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಹಾಗೂ ಸ್ನೇಹಿತರ ಬಳಗದವರಿಂದ ನಡೆದ ಅಭಿನಂದನೆ-ಹಿರಿಯರ ನೆನಪು ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಸೋಮವಾರ ಮಾತನಾಡಿದರು.
ಯಕ್ಷಗಾನದಲ್ಲಿ ಅನೇಕ ಸಾಧಕರಿದ್ದಾರೆ ಅವರನ್ನು ಗುರುತಿಸಿ ಗೌರವಿಸುವುದು ಉತ್ತಮ ಬೆಳವಣಿಗೆ. ಯಕ್ಷಗಾನ ಇಂದು ಮತ್ತಷ್ಟು ಪ್ರಚಲಿತ ಆಗಬೇಕದಾರೆ ಪ್ರತಿ ಮನೆಯಲ್ಲಿ ಪ್ರದರ್ಶನಗೊಳ್ಳುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ ನಮ್ಮ ನೆಲದ ಕಲೆ ಯಕ್ಷಗಾನ. ಇದು ಶ್ರೀಮಂತ ಕಲೆ. ಅನೇಕ ಹಿರಿಯರು ಸಾಂಸ್ಕೃತಿಕ ಕಲೆಯ ಬೀಜವನ್ನು ಬಿತ್ತಿದ್ದಾರೆ. ಹೊಸಗದ್ದೆಯ ಯಕ್ಷಗಾನ ಪ್ರದರ್ಶನ ಎಲ್ಲರಿಗೂ ಮಾದರಿ ಆಗಿದೆ ಎಂದು ಹೇಳಿದರು.
ಯಕ್ಷಗಾನ ಕಲಾವಿದ,ಸಂಘಟಕ ಮಹಾಬಲೇಶ್ವರ ಭಟ್ಟ ಇಟಗಿ ಅವರನ್ನು ಅಭಿನಂದಿಸಿಲಾಯಿತು ಹಾಗೂ ರೇಖಾ ನರೇಂದ್ರ ಹೆಗಡೆ ಹೊಂಡಗಾಸಿಗೆ ಹಾಗೂ ನಂದನ ನಾಯ್ಕ ಅರಶಿನಗೋಡ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಪಿ.ವಿ.ಹೆಗಡೆ ಹೊಸಗದ್ದೆ ಅವರು ಸರಸ್ವತಿ ವೆಂಕಟ್ರಮಣ ಹೆಗಡೆ ಹೊಸಗದ್ದೆ,ಮಂಜುನಾಥ ಭಾಗವತ್ ಹೊಸ್ತೋಟ, ಎಂ.ಎ.ಹೆಗಡೆ ದಂಟಕಲ್, ಪಿ.ಎಂ.ಭಟ್ಟ ಹೊಸ್ತೋಟ, ವಿಶ್ವನಾಥ ಶೇಟ್ ಹಾರ್ಸಿಕಟ್ಟಾ, ಬಂಗಾರ್ಯ ನಾಯ್ಕ ಹಳಿಯಾಳ,ಅಕ್ಷರ ಹಣಜೀಬೈಲ್ ಈ ಎಲ್ಲ ಹಿರಿಯರ ಕುರಿತು ಮಾತನಾಡಿದರು.
ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ, ಯಕ್ಷಗಾನ ಪೋಷಕ ಡಿ.ಕೆ.ನಾಯ್ಕ ತೆಂಗಿನಮನೆ, ಪ್ರಗತಿಪರ ಕೃಷಿಕ ಸುಬ್ರಾಯ ಹೆಗಡೆ ಮತ್ತಿಗಾರ ಉಪಸ್ಥಿತರಿದ್ದರು.
ದೀಪಿಕಾ ಹೆಗಡೆ ಪ್ರಾರ್ಥನೆ ಹಾಡಿದರು.ರೂಪಾ ಪ್ರವೀಣ ಹೆಗಡೆ ಸ್ವಾಗತಿಸಿದರು.ಪಿ.ವಿ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಅನಂತ ಹೆಗಡೆ ವಂದಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ ಹೆಗಡೆ ಸಹಕರಿಸಿದರು.
ನಂತರ ಪ್ರದರ್ಶನಗೊಂಡ ಲವ-ಕುಶ ಯಕ್ಷಗಾನದ ಹಿಮ್ಮೇಳದಲ್ಲಿ ಎಂ.ಪಿ.ಹೆಗಡೆ ಉಳ್ಳಾಳಗದ್ದೆ, ಶ್ರೀಪಾದ ಹೆಗಡೆ, ಶ್ರೀಪಾದ ಭಟ್ಟ ಮೂಡಗಾರ, ಉಮೇಶ ಹೆಗಡೆ ಉಮ್ಮಚಗಿ ಸಹಕರಿಸಿದರು. ಪಿ.ವಿ.ಹೆಗಡೆ ಹೊಸಗದ್ದೆ, ಮಹಾಬಲೇಶ್ವರ ಇಟಗಿ, ಬಾಬಣ್ಣ ಬಿಳೆಕಲ್, ಪ್ರಶಾಂತ ಹೆಗಡೆ ಗೋಡೆ, ಪುರುಷೋತ್ತಮ ಹೆಗಡೆ ಮುಗದೂರು, ವೆಂಕಟ್ರಮಣ ಹೆಗಡೆ, ಪ್ರಸನ್ನ ಹೆಗಡೆ ಹೊಸಗದ್ದೆ, ಅಭಯ ಹೆಗಡೆ, ಪ್ರಥ್ವಿ ನಾಯ್ಕ, ಭೂಮಿಕಾ ಹೆಗಡೆ, ಆದಿತ್ಯ ಹೆಗಡೆ, ಅಮಿತ್ ಭಟ್ಟ, ಸ್ಕಂದ ಹೆಗಡೆ ಇವರು ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು.