• Slide
    Slide
    Slide
    previous arrow
    next arrow
  • ಬೆಂಗಳೂರಿನಲ್ಲಿ ಅರಣ್ಯವಾಸಿಗಳ ಸಮಸ್ಯೆಗೆ ಉನ್ನತ ಮಟ್ಟದ ಸಭೆ

    300x250 AD

    ಶಿರಸಿ: ಸರ್ವೋಚ್ಛ ನ್ಯಾಯಾಲಯದಲ್ಲಿ ಅರಣ್ಯವಾಸಿಗಳ ಪರವಾಗಿ ಅಫಿಡಾವಿಟ್ ಸಲ್ಲಿಸುವುದು, ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾಗಿರುವ ಎಲ್ಲಾ ಅರ್ಜಿಗಳನ್ನು ಕಾನೂನು ಬದ್ಧವಾಗಿ ವಿಲೇವಾರಿ ಮಾಡುವುದು, ಪ್ರತೀ ಸೋಮವಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸಬೇಕೆಂಬ ಪ್ರಕ್ರಿಯೆ, ಅರಣ್ಯ ಇಲಾಖೆಯ ಆದೇಶವನ್ನ ಸ್ಥಗಿತಗೊಳಿಸುವುದು ಹಾಗೂ ಅತಿವೃಷ್ಟಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಮನೆ ನಂಬರ್ ಪಡೆದುಕೊಂಡ ಕಟ್ಟಡಗಳಿಗೆ ಪುನರ್ ನಿರ್ಮಾಣಕ್ಕೆ ಆತಂಕ ಪಡಿಸಬಾರದಂತ ಮಹತ್ವ ಪೂರ್ಣ ನಿರ್ಣಯಗಳು ಜರುಗಿದವು.

    ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ, ಕಾರ್ಮಿಕ ಇಲಾಖೆಯ ಸಚಿವ ಅರೇಬೈಲ್ ಶಿವರಾಮ ಹೇಬ್ಬಾರ್ ನೇತ್ರತ್ವದಲ್ಲಿ ಇಂದು ವಿಧಾನ ಸೌಧದ ಸಭಾಂಗಣದಲ್ಲಿ ಜರುಗಿದ ಮಹತ್ವಪೂರ್ಣ ರಾಜ್ಯಮಟ್ಟದ ಉನ್ನತಮಟ್ಟದ ಸಭೆಯಲ್ಲಿ ಮೇಲಿನಂತೆ ನಿರ್ಣಯಗಳನ್ನು ನಿರ್ಣಯಿಸಲಾಯಿತು.

    ಅರಣ್ಯವಾಸಿಗಳ ಪರವಾಗಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸಮಸ್ಯೆಗಳನ್ನು ಸರಕಾರದ ಮುಂದೆ ಮಂಡಿಸಿದರು. ಜಿಲ್ಲೆಯ ಮಾಜಿ ಮುಖ್ಯ ಮಂತ್ರಿ ಆರ್ ವಿ ದೇಶಪಾಂಡೆ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು.

    ಜಿಲ್ಲೆಯ ಶಾಸಕರುಗಳಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ಧಿ, ಎಸ್ ವಿ ಶಂಕನೂರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್, ಜಿಲ್ಲೆಯ ಅರಣ್ಯ ಅಧಿಕಾರಿಗಳಾದ ಯತೀಶ ಕುಮಾರ, ಗಣಪತಿ, ಎಸ್ ಜಿ ಹೆಗಡೆ, ಗೋಪಾಲ ಹೆಗಡೆ, ರಾಜ್ಯದ ಪರಿಶಿಷ್ಟ ಕಲ್ಯಾಣ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಗ್ರಾಮೀಣ ಅಭಿವೃದ್ಧಿ ಮುಂತಾದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಹೋರಾಟದ ವೇದಿಕೆಯ ಪ್ರತಿನಿಧಿಯಾಗಿ ಅಧ್ಯಕ್ಷ ರವೀಂದ್ರ ನಾಯ್ಕ, ಪ್ರಧಾನ ಸಂಚಾಲಕರಾದ ಜಿ.ಎಮ್ ಶೆಟ್ಟಿ ಹಾಗೂ ದಂಡು ಪಾಟೀಲ್ ಯಲ್ಲಾಪುರ ಪ್ರತಿನಿಧಿಸಿದ್ದರು.

    ಅರಣ್ಯವಾಸಿಗಳ ಪರವಾಗಿ ಹತ್ತು ಪ್ರಮುಖ ಸಮಸ್ಯೆಗಳ ಮನವಿಯನ್ನ ಸಮಾಜ ಕಲ್ಯಾಣ ಸಚೀವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹೋರಾಟಗಾರರ ವೇದಿಕೆಯು ಅರ್ಪಿಸಿತು.

    ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಸ್ತಾಪಿಸಿದ ಅಂಶಗಳು:

    300x250 AD

    “ನೊಂದವರಿಗೆ ನ್ಯಾಯ ಕೋಡಬೇಕು ವಿನಃ ಮನುಷತ್ವ ಇಲ್ಲದೇ ಅರಣ್ಯವಾಸಿಗಳಿಗೆ ಹಿಂಸೆ ಕೋಡುವುದಾಗಲಿ, ಕಿತ್ತುಹಾಕುವುದಾಗಲಿ ಸಮಂಜಸವಲ್ಲ. ನ್ಯಾಯಯುತ ಆದೇಶವೆಂದು ಒಕ್ಕಲೆಬ್ಬಿಸಲು ಹೊದರೇ ರಕ್ತಪಾತ ಮತ್ತು ದೊಂಬಿಗೆ ಕಾರಣವಾಗುವುದು. ಇಲಾಖೆಯು ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ಹೋರಾಟಗಾರರ ಸಲಹೆ ಪಡೆದು ಕ್ರಮ ಜರುಗಿಸಬೇಕು.” – ಕೋಟ ಶ್ರಿನಿವಾಸ ಪೂಜಾರಿ (ಸಚಿವ, ಸಮಾಜ ಕಲ್ಯಾಣ ಇಲಾಖೆ)

    “ಕಟ್ಟಕಡೆಯ ಅರಣ್ಯವಾಸಿಗೂ ಹಕ್ಕು ಕೊಡುವಲ್ಲಿ ಅರಣ್ಯ ಅಧಿಕಾರಿ ವಿವಿಧ ಇಲಾಖೆಯ ಮುಖ್ಯಸ್ಥರು ಇಚ್ಛಾಶಕ್ತಿ ವ್ಯಕ್ತಪಡಿಸಬೇಕು. ಅರಣ್ಯವಾಸಿಗಳಿಗೆ ವ್ಯತಿರಿಕ್ತವಾಗಿ ಅಧಿಕಾರಿಗಳು ಸಲಹೆ ನೀಡಿದ್ದಲ್ಲಿ ಅದನ್ನು ಸರಕಾರ ಒಪ್ಪಲು ಸಾಧ್ಯವಿಲ್ಲ. ಅರಣ್ಯವಾಸಿಗಳ ಪರವಾಗಿ ಸರಕಾರ ಬದ್ಧವಾಗಿದೆ.”

    – ಅರೇಬೈಲ್ ಶಿವರಾಮ ಹೇಬ್ಬಾರ್ (ಸಚಿವ, ಕಾರ್ಮಿಕ ಇಲಾಖೆ)

    ಅರಣ್ಯವಾಸಿಗಳ ಪರವಾದ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಅರಣ್ಯವಾಸಿಗಳ ಅರ್ಜಿಗಳನ್ನು ತೀರಸ್ಕರಿಸಲಾಗಿದ್ದು ಅರಣ್ಯವಾಸಿಗ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ, ಆತಂಕ, ಮಾನಸಿಕ ಹಿಂಸೆ ಅರಣ್ಯ ಇಲಾಖೆಯಿಂದ ಜರುಗುತ್ತಿದ್ದು, ಅರಣ್ಯವಾಸಿಗಳ ಮೇಲೆ ದಾಖಲಿಸಿದ ಕ್ರೀಮಿನಲ್ ಪ್ರಕರಣ ಹಿಂದಕ್ಕೆ ಪಡೆಯಬೇಕು. ಒಕ್ಕಲೆಬ್ಬಿಸುವ ಪ್ರಕ್ರೀಯೆ ಸ್ಥಗಿತಗೊಳಿಸಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಗ್ರಹಿಸಿದರು.

    ಹೆಬ್ಬಾರ್ ಆಕ್ರೋಶ: ಸರಕಾರದ ಅನುಮತಿಯಲ್ಲದೇ ಪ್ರತೀ ಸೋಮವಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಸುತ್ತೋಲೆ ಹೊರಡಿಸಲು ಅರಣ್ಯ ಇಲಾಖೆಗೆ ಅನುಮತಿ ನೀಡಿದವರ್ಯಾರು . . . . . . . . ? ಕಾನೂನಿನಲ್ಲಿ ಕೆಟ್ಟ ಅಂಶಗಳನ್ನು ಮಾತ್ರ ಅನುಸರಿಸಿ ಅರಣ್ಯವಾಸಿಗಳಿಗೆ ವ್ಯತಿರಿಕ್ತವಾಗಿ ಹಿಂಸೆ ನೀಡುವ ಪ್ರವೃತ್ತಿ ಕೈ ಬೀಡಿ, ಅರಣ್ಯವಾಸಿಗಳ ಪರ ಅಧಿಕಾರಿಗಳು ಕ್ರಮ ಜರುಗಿಸಿ ತಕ್ಷಣ ಒಕ್ಕಲೆಬ್ಬಿಸುವ ಪ್ರಕ್ರೀಯೆ ಆದೇಶ ಸ್ಥಗಿತಗೊಳಿಸಿ ಎಂದು ಅರೇಬೈಲ್ ಶೀವರಾಮ ಹೇಬ್ಬಾರ್ ಆಕ್ರೋಶವನ್ನು ವ್ಯಕ್ತಪಡಿಸಿದರು.

    ಸಭೆಯ ವಿಶೇಷತೆ: ಪಕ್ಷಾತೀತವಾಗಿ ಸಭೆಯ ಜನಪ್ರತಿನಿಧಿಗಳು ಒಕ್ಕಟ್ಟು ಪ್ರದರ್ಶನ, ಅರಣ್ಯವಾಸಿಗಳ ಪರ ತೀರ್ಮಾನ, ದೌರ್ಜನ್ಯ ನಿಯಂತ್ರಣಕ್ಕೆ ಅಗ್ರಹ, ಹೋರಾಟಗಾರರ ಅಭಿಪ್ರಾಯಕ್ಕೆ ವಿಶೇಷ ಮನ್ನಣೆ ಹಾಗೂ 6 ಪ್ರಮುಖ ಇಲಾಖೆಯ ಮುಖ್ಯಸ್ಥರ ಉಪಸ್ಥಿತಿ ಇಂದಿನ ಸಭೆ ವಿಶೇಷತೆ ಎಂದರೇ ತಪ್ಪಾಗಲಾರದು.

    Share This
    300x250 AD
    300x250 AD
    300x250 AD
    Leaderboard Ad
    Back to top