ಶಿರಸಿ:ಕರ್ನಾಟಕ ಯಕ್ಷಗಾನ ಆಕಾಡೆಮಿ ಮತ್ತು ಅಭಿಮಾನ ಸಾಂಸ್ಕೃತಿಕ ವೇದಿಕೆ (ರಿ) ಶಿರಸಿ ಇವರ ಸಹಯೋಗದಲ್ಲಿ ಫೆ.25 ರ ಶುಕ್ರವಾರ ಮಧ್ಯಾಹ್ನ 2.30 ರಿಂದ ನಗರದ ಯೋಗಮಂದಿರದಲ್ಲಿ ಮೊದಲ ಮಹಿಳಾ ಪ್ರಸಂಗಕರ್ತೆ ಕಿಬ್ಬಚ್ಚಲು ಮಂಜಮ್ಮರ ಕುರಿತಂತೆ ವಿಚಾರಗೋಷ್ಠಿ ಮತ್ತು ನಚಿಕೇತ ತಾಳಮದ್ದಳೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್.ಹೆಗಡೆ ಕುಮಟಾ ವಹಿಸಲಿದ್ದಾರೆ.
ವಿಚಾರಗೋಷ್ಠಿಯಲ್ಲಿ ನಾರಾಯಣ ಯಾಜಿ ಸಾಲೇಬೈಲು, ಡಾ.ವಿಜಯನಳಿನಿ ರಮೇಶ್ ಭಾಗವಹಿಸುವರು. ಅಭಿಮಾನ ಸಾಂಸ್ಕೃತಿಕ ವೇದಿಕೆಯ ವಿ.ಎನ್.ಭಾಗ್ವತ ಬರಬಳ್ಳಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ನಂತರ 3.30 ರಿಂದ ನಚಿಕೇತ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಶಂಕರ ಭಾಗವತ ಯಲ್ಲಾಪುರ ಮತ್ತು ಮುಮ್ಮೇಳದಲ್ಲಿ ಸೂರಾಲು ದೇವಿಪ್ರಸಾದ ತಂತ್ರಿ, ನಾರಾಯಣ ಯಾಜಿ ಸಾಲೇಬೈಲು, ಎಂ.ಎನ್. ಹೆಗಡೆ ಹಳವಳ್ಳಿ ಮತ್ತು ನಿರ್ಮಲಾ ಹೆಗಡೆ ಗೋಳಿಕೊಪ್ಪ ಭಾಗವಹಿಸಲಿದ್ದಾರೆ.