ಶಿರಸಿ: ಸೃಷ್ಟಿ ಕಲಾಪ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಸನ್ಮಾನ, ಗುರುವಂದನೆ ಹಾಗೂ ತಾಳಮದ್ದಳೆ ಕಾರ್ಯಕ್ರಮವನ್ನು ಫೆ.27 ರ ಮಧ್ಯಾಹ್ನ 3 ಘಂಟೆಗೆ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನುಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆ ಕುಮಟಾ ಉದ್ಘಾಟಿಸಲಿದ್ದು, ‘ಸೃಷ್ಟಿ ಕಲಾಪ’ ಸಂಸ್ಥೆಯ ಸಂಸ್ಥಾಪಕರಾದ ಡಾ. ವಿಜಯನಳಿನಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಲೇಖಕರು ಹಾಗೂ ಅಂಕಣಕಾರರಾದ ಭುವನೇಶ್ವರಿ ಹೆಗಡೆ ಅತಿಥಿಯಾಗಿ ಆಗಮಿಸಲಿದ್ದಾರೆ. ಸೃಷ್ಟಿ ಕಲಾಪ’ದ ಮಾರ್ಗದರ್ಶಕರಾದ ಸುಬ್ರಾಯ ಹೆಗಡೆ ಕೆರೆಕೊಪ್ಪ ಇವರ ಉಪಸ್ಥಿತಿ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ನಂತರ ದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಇವರಿಂದ ಜ್ವಾಲಾ ಪಾತ್ರಾಭಿನಯ ನಡೆಯಲಿದೆ.
ನಂತರ ಕಲಾಪದ ಸದಸ್ಯೆಯರಿಂದ ಸುಧನ್ವಾರ್ಜುನ ತಾಳಮದ್ದಳೆ ನಡೆಯಲಿದೆ.
ಸಭಾಕಲಾಪದ ಆರಂಭದಲ್ಲಿ ತುಳಸಿ ಹೆಗಡೆ ಅವರಿಂದ ಯಕ್ಷನೃತ್ಯ ಪ್ರದರ್ಶನಗೊಳ್ಳಲಿದೆ.