ಕಾರವಾರ: 2021-22ನೇ ಸಾಲಿನ ಡಾ. ಬಿ.ಆರ್ ಅಂಬೇಡ್ಕರ್ ನಿವಾಸ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ, ನಿವಾಸ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಡಾ. ಅಂಬೇಡ್ಕರ್ ನಿವಾಸ ಯೋಜನೆಯಡಿ ಪ.ಜಾ, ಹಾಗೂ ಪ.ಪಂ ರೂ 3.30 ಲಕ್ಷದ ಆರ್ಥಿಕ ನೆರವು ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಸಾಮಾನ್ಯ ಹಾಗೂ ಅಲ್ಪ ಸಂಖ್ಯಾತ ವರ್ಗದವರಿಗೆ ರೂ 2.70 ಲಕ್ಷ ಆರ್ಥಿಕ ನೆರವಿನಿಂದ ಮನೆ ನಿರ್ಮಿಸಿಕೊಳ್ಳಲು ಸ್ವಂತ ನಿವೇಶನ ಹೊಂದಿದ ವಸತಿ ರಹಿತ ಅರ್ಹ ಫಲಾನುಭವಿಗಳಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹಿಂದೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸ ಬಯಸುವವರು ಜಾತಿ ಮತ್ತು ಆದಾಯ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ, ಪಡಿತರ ಚೀಟಿ, ಚುನಾವನಾ ಗುರುತಿನ ಚೀಟಿ , ಪಹಣಿ ಪತ್ರ, ಛಾಯಾಚಿತ್ರ ಹಾಗೂ ನಮೂನೆ-3 ರೊಂದಿಗೆ ಅರ್ಜಿಯನ್ನು ಅಂಕೋಲಾ ಪುರಸಭೆ ಕಾರ್ಯಾಲಯಕ್ಕೆ ಫೆ.28 ರ ಒಳಗಾಗಿ ಸಲ್ಲಿಸತಕ್ಕದ್ದು, ಅವಧಿ ಮೀರಿದ ಹಾಗೂ ದಾಖಲೆಗಳು ಸರಿಯಿಲ್ಲದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಅಂಕೋಲಾ ಪುರಸಭೆ ಕಾರ್ಯಾಲಯ ಕಚೇರಿ ಹಾಗೂ ಕಚೇರಿಯ ವೆಬ್ ಸೈಟ್ www.ankolatown.mrc.gov.in ಅನ್ನು ಅಥವಾ ದೂರವಾಣಿ ಸಂಖ್ಯೆ 08388-230268ಗೆ ಸಂಪರ್ಕಿಸಬಹುದಾಗಿದೆಯೆಂದು ಪ್ರಕಟಣೆ ತಿಳಿಸಿದೆ.