• Slide
    Slide
    Slide
    previous arrow
    next arrow
  • ಫೆ.26ಕ್ಕೆ ಸಿದ್ದಿ ಜನಾಂಗದ ಕ್ರೀಡಾಕೂಟ; ಸಾಂಸ್ಕೃತಿಕ ಕಾರ್ಯಕ್ರಮ

    300x250 AD

    ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಫೆ. 26 ರಂದು ಹಳಿಯಾಳ ತಾಲೂಕು ಕ್ರೀಡಾಂಗಣದಲ್ಲಿ ಸಿದ್ದಿ ಜನಾಂಗದವರಿಗೆ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಆಸಕ್ತ ಸಿದ್ದಿ ಜನಾಂಗದ ಕ್ರೀಡಾಪಟು ಹಾಗೂ ಕಲಾವಿದರು ತಮ್ಮ ಹೆಸರನ್ನು ಫೆ. 24 ರೊಳಗೆ ನೋಂದಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನೋಂದಾವಣೆಗೆ ಅವಕಾಶವಿರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಆಯಾ ತಾಲೂಕು ಕೇಂದ್ರ ಸ್ಥಳದಿಂದ ವಾಹನ ವ್ಯವಸ್ಥೆ ಹಾಗೂ ಊಟೋಪಹಾರ ಪೂರೈಸಲಾಗುವುದು. ಸ್ಪರ್ಧಾಳುಗಳು ಈ ಕೆಳಗೆ ನಮೂದಿಸಿದವರಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.

    ಸಂತೋಷ ಸಿದ್ದಿ ಅಂಕೋಲಾ: 7899444669, ಮಂಜುನಾಥ ಸಿದ್ದಿ ಶಿರಸಿ: 9483484005, ಸಾವೇರ ಸಿದ್ದಿ: 9900996364, ಮೋಜೆಸ್ ಮಂಗಳವಾಡಕರ: 9972541296, ಭಾಸ್ಕರ ಸಿದ್ದಿ ಯಲ್ಲಾಪುರ: 9986151867 ಮತ್ತು 7899444669 ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

    300x250 AD

    ಹೆಚ್ಚಿನ ಸಂಖ್ಯೆಯ ಸಿದ್ದಿ ಜನಾಂಗದ ಕ್ರೀಡಾಪಟುಗಳು ಭಾವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top