• Slide
    Slide
    Slide
    previous arrow
    next arrow
  • ಸಚಿವ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಕಾರವಾರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

    300x250 AD

    ಕಾರವಾರ: ತ್ರಿವರ್ಣ ಧ್ವಜದ ಬದಲಿಗೆ ಕೇಸರಿ ಧ್ವಜವನ್ನು ಕೆಂಪುಕೋಟೆಯಲ್ಲಿ ಹಾರಿಸಬೇಕೆಂದು ಹೇಳಿರುವ ಸಚಿವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕಾರವಾರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಶಾಸಕ ಸತೀಶ ಸೈಲ್ ನಾಯಕತ್ವದಲ್ಲಿ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

    ಮಾಜಿ ಶಾಸಕ ಸತೀಶ ಸೈಲ್ ಮಾತನಾಡಿ, ಸಚಿವ ಈಶ್ವರಪ್ಪರ ಹೇಳಿಕೆ ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಆದ್ದರಿಂದ ಅವರು ಮಂತ್ರಿಯಾಗಿ ಮುಂದುವರಿಯುವ ಅರ್ಹತೆ ಕಳಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

    300x250 AD

    ಉಪವಿಭಾಗಾಧಿಕಾರಿ ವಿಜಯಲಕ್ಷ್ಮೀ ರಾಯಕೋಡ ಮನವಿ ಸ್ವೀಕರಿಸಿ, ರಾಜ್ಯಪಾಲರಿಗೆ ಕಳುಹಿಸುವುದಾಗಿ ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಸಮೀರ್ ನಾಯ್ಕ, ಕೆ.ಶಂಭು ಶೆಟ್ಟಿ, ಪ್ರಭಾಕರ ಮಾಲ್ಸೇಕರ್, ರವೀಂದ್ರ ಅಮದಳ್ಳಿ, ಕೃಷ್ಣ ಮೆಹ್ತಾ, ಬಾಬು ಶೇಖ್, ಫ್ರಾಂಕಿ ಗುಧಿನೋ, ವಿಠ್ಠಲ ಸಾವಂತ್, ರಾಜೇಂದ್ರ ಅಂಚೇಕರ್, ದೇವಾನಂದ ಟಾನೇಕರ್, ಲೀಲಾ ಬಾಯಿ ಠಾನೇಕರ್, ಪ್ರಕಾಶ್ ಪಡ್ತಿ, ಸುರೇಶ ಗೌಡ, ಚಂದ್ರಕಾಂತ್ ಆಗೇರ, ನಾಗರಾಜ ಪಡ್ತಿ, ನಾಗರಾಜ ಗೌಡ,ಅಲಿ ಖುರೇಷಿ, ದಿವಾಕರ್ ಆಮದಲ್ಲಿ, ನೂತನ ಜೈನ್, ಸಂದೀಪ್ ಎಸ್ ಕೆ, ಅಜಯ್ ಸೀಗ್ಲಿ, ಸೂರಜ್ ನಾಯ್ಕ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top