ಕಾರವಾರ: ಜಿಲ್ಲಾ ಆಗೇರ ಸಮಾಜದ ಅಭಿವೃದ್ಧಿ ಸಂಘದ ವತಿಯಿಂದ ಆಗೇರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲು ನಿರ್ಧರಿಸಿದ್ದು, ಫೆ.28ರ ಒಳಗೆ ಅರ್ಹ ವಿದ್ಯಾರ್ಥಿಗಳು ಅಂಕ ಪಟ್ಟಿಯ ಪ್ರತಿಯನ್ನು ತಲುಪಿಸಲು ಸಂಘ ತಿಳಿಸಿದೆ.
2016-2017 ರಿಂದ 2020-2021 ರ ವರೆಗಿನ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.80 ಮೇಲ್ಪಟ್ಟ, ದ್ವಿತೀಯ ಪಿಯುಸಿ ಹಾಗೂ ಪದವಿಯ ಅಂತಿಮ ಫಲಿತಾಂಶದಲ್ಲಿ ಶೇ70 ಕ್ಕೂ ಮೇಲ್ಪಟ್ಟು, ಸ್ನಾತಕೋತ್ತರ ಶಿಕ್ಷಣದ ಅಂತಿಮ ಫಲಿತಾಂಶದಲ್ಲಿ ಶೇಕಡಾ 60ಕ್ಕೂ ಮೇಲ್ಪಟ್ಟು, ಡಿ.ಇಡಿ., ಬಿ.ಇಡಿ, ನಸಿರ್ಂಗ್, ಐ.ಟಿ.ಐ ಮುಂತಾದ ವೃತ್ತಿಪರ ಕೋರ್ಸ್‍ಗಳ ಅಂತಿಮ ಪರಿಣಾಮದಲ್ಲಿ ಶೇಕಡಾ 80 ಕ್ಕೂ ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.
ಅರ್ಹ ವಿದ್ಯಾರ್ಥಿಗಳು ಅಂಕ ಪಟ್ಟಿಯ ಪ್ರತಿಯನ್ನು ಫೆ.28ರ ಒಳಗೆ ಗುರು ಶೇಡಗೇರಿ 7795289428, ಮಂಜುನಾಥ ಶೇಡಗೇರಿ 9482787527, ಜಯಶೀಲ ಆಗೇರ 9483668349 ಇವರ ಬಳಿ ಖುದ್ದಾಗಿ ಅಥವಾ ವಾಟ್ಸಾಪ್ ನಂಬರಿಗೆ ತಲುಪಿಸಬೇಕೆಂದು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.