ಕಾರವಾರ:ಪಟ್ಟಣ ಪಂಚಾಯತ್ ಮುಂಡಗೋಡದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರದಂತೆ ತಾತ್ಕಾಲಿಕವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಲು 1 ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಒಕ್ಕೂಟ ಮತ್ತು ಸ್ವ ಸಹಾಯ ಸಂಘದ ಸದಸ್ಯರು ತಮ್ಮ ಅರ್ಜಿಯನ್ನು ಪಟ್ಟಣ ಪಂಚಾಯತ್ ಮುಂಡಗೋಡ ಕಚೇರಿಯಲ್ಲಿ ಲಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ 8 ರೊಳಗಾಗಿ ಅದೇ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ಷರತ್ತುಗಳಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಅಥವಾ ಪಟ್ಟಣ ಪಂಚಾಯತ ಕಾರ್ಯಾಲಯ ಸೂಚನಾ ಫಲಕದಲ್ಲಿ ಲಗತ್ತಿಸಿದ ಪ್ರಕಟಣೆಯ ಮೂಲಕ ತಿಳಿಯಬಹುದಾಗಿದೆ.