ಅಂಕೋಲಾ : ಶಿವಾಜಿ ಜಯಂತ್ಯೋತ್ಸವ ಪ್ರಯುಕ್ತ ಹಿಂದೂ ಕಪ್ ಕ್ರಿಕೆಟ್ ಪಂದ್ಯಾವಳಿ ಫೆ. 25 ರಿಂದ 27 ರ ವರೆಗೆ ಪಟ್ಟಣದ ಜೈಹಿಂದ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟನೆ ಅಧ್ಯಕ್ಷ ಜಗದೀಶ ನಾಯಕ ಮೋಗಟಾ ಹೇಳಿದರು.
ಪಟ್ಟಣದ ಗುರುಪ್ರಸಾದ ಹೊಟೇಲ್‍ನಲ್ಲಿ ಆಯೋಜಿಸಿದ ಪ್ರತಿಕಾಗೊಷ್ಠಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯ ಉದ್ದೇಶ ಮತ್ತು ನಿಯಮಗಳ ಕುರಿತು ತಿಳಿಸಿ ಮಾತನಾಡಿ ಇದು ಪಕ್ಷಾತೀತವಾಗಿ ಸಂಘಟನೆಯಾಗಿದ್ದು, ಸಮಾನ ಮನಸ್ಕರ ಹಿಂದೂ ಸಮೂದಾಯವು ಸಂಘಟನೆಯ ನೇತ್ರತ್ವವಹಿಸಿದೆ. ಹಿಂದೂ ಸಮಾಜದ ಸೌಹಾರ್ದತೆ ಹಾಗೂ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಈ ಪಂದ್ಯವಾವಳಿ ಆಯೋಜಿಸಲಾಗಿದೆ. ಪಕ್ಷಬೇಧವಿಲ್ಲದೆ ಪಂದ್ಯಾವಳಿಯಲ್ಲಿ ಕ್ರೀಡಾ ಪತ್ರಿಭಾವಂತರು ಭಾಗವಹಿಸಲು ಅವಕಾಶವಿದೆ. ಹಿಂದೂ ಸಾಮ್ರಾಜ್ಯ ಕಲ್ಪನೆ ಮೂಡಿಸಲು ಪ್ರೇರಣೆಯಾಗಬೇಕೆಂದು ಈ ಪಂದ್ಯಾವಳಿ ಆಯೋಜನೆಗೊಂಡಿದೆ ಎಂದು ಹೇಳಿದರು.
ಭಾಜಪ ಮಂಡಳಾಧ್ಯಕ್ಷ ಸಂಜಯ ಎಂ ನಾಯ್ಕ ಮಾತನಾಡಿ ಹಿಂದೂ ಸಾಮ್ರಾಟ ಶಿವಾಜಿ ಅವರ ಜಯಂತಿಯನ್ನು ಹಿಂದೂ ಸಮೂದಾಯದವರು ಸೇರಿ ಆಚರಿಸುತ್ತಿದ್ದೇವೆ. 3 ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ. ಇದು ಯಾವುದೇ ಪಕ್ಷಕ್ಕೆ ಸೀಮಿತವಾಗಿರದೆ ಎಲ್ಲ ಹಿಂದೂಗಳು ಪಾಲ್ಗೊಳ್ಳಲು ಅವಕಾಶವಿದೆ ಎಂದರು.
ಚಾಂಪಿಯನ್ ವಿಜೇತರಿಗೆ 44,444 ರೂ ಪ್ರಥಮ ಬಹುಮಾನ ಮತ್ತು ಆಕರ್ಷಕ ಟ್ರೋಪಿ ಹಾಗೂ ದ್ವಿತೀಯ ಬಹುಮಾನ 22,222 ರೂ ಟ್ರೋಪಿ ಸೇರಿದಂತೆ ವಿವಿಧ ಬಹುಮಾನಗಳನ್ನು ಸಹ ನೀಡಲಾಗುತ್ತದೆ.
ಫೆ.24 ರಂದು ವಿಶೇಷ ಪಂದ್ಯಾವಳಿ ಫೆ.24 ರಂದು ಮುಂಜಾನೆಯಿಂದ ಸಂಜೆ ತನಕ 18 ರಿಂದ 21 ವರ್ಷ ಒಳಪಟ್ಟ ಯುವಕರಿಗೆ ವಿಶೇಷ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಇವರಿಗೂ ಸಹ ಬಹುಮಾನ ಮತ್ತು ಟ್ರೋಪಿ ಅದೇ ದಿನ ನೀಡಲಾಗುತ್ತದೆ.
ಪ್ರತಿಕಾಗೋಷ್ಠಿಯಲ್ಲಿ ಸಂಘಟಕರಾದ ಚಂದ್ರಕಾಂತ ಎನ್. ನಾಯ್ಕ, ಪ್ರವೀಣ ನಾಯ್ಕ, ಸಂದೀಪ ಗಾಂವಕರ, ಬಾಲಕೃಷ್ಣ ಎನ್. ನಾಯ್ಕ ಬೊಬ್ರವಾಡ, ಶಾಂತಾ ಹರಿಕಾಂತ, ಮಂಜುನಾಥ ವೆಂಕಟ್ರಮಣ ನಾಯ್ಕ, ಗಜೇಂದ್ರ ನಾಯ್ಕ, ನಾಗರಾಜ ನಾಯ್ಕ ಕನಸಿಗದ್ದೆ, ನಾಗೇಶ ಕಿಣಿ, ಸುಧೀರ ನಾಯ್ಕ ತೆಂಕಣಕೇರಿ, ಮಂಜುನಾಥ ನಾಯ್ಕ ಬೊಬ್ರವಾಡÀ ಮುಂತಾದವರು ಉಪಸ್ಥಿತರಿದ್ದರು.