ಹೊನ್ನಾವರ: ತಾಲೂಕಿನ ಹಳದಿಪುರದ ಶ್ರೀ ಸಂಸ್ಥಾನ ಶಾಂತಾಶ್ರಮ ಮಠದಲ್ಲಿ ಗ್ರಾಮ ವಾಸ್ತವ್ಯದಲ್ಲಿ ಅವಹಾಲು ಸ್ವೀಕರಿಸಿ ಸಭೆಯ ಮುಕ್ತಾಯದ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಸಂಬಂದಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಹಳದಿಪುರದ ಕೊಡಿಚಿಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಅವಹಾಲು ನೀಡಿದ್ದು ಸಭೆಯ ಬಳಿಕ ಸಹಾಯಕ ಆಯುಕ್ತರಾದ ಮಮತಾದೇವಿ ಜಿ.ಎಸ್. ಗ್ರೇಡ್ 2 ತಹಶೀಲ್ದಾರ್ ಉಷಾ ಪಾವಸ್ಕರ್, ಸಿಪಿಐ ಶ್ರೀಧರ್ ಎಸ್. ಆರ್. ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಂಚಾಯತ್ ಅನುದಾನದಲ್ಲಿ ಸರ್ಕಾರಿ ಬಾವಿಯನ್ನು ಸ್ವಚ್ಛಗೊಳಿಸಿ ಮೇಶ್ ಹಾಕುವಂತೆ ಸೂಚಿಸಿದರು. ಹಾಗೂ ಸತೀಶ್ ಹಬ್ಬು ಅವರ ಜಾಗದಲ್ಲಿ ಇರುವ ಸರ್ಕಾರದ ಬಾವಿ ನ್ಯಾಯಾಲಯ ವಿಚಾರಣೆಯಲ್ಲಿದ್ದು ಪ್ರಕರಣ ಇತ್ಯರ್ಥ ದ ನಂತರ ಯೋಜನೆ ರೂಪಿಸಲಾಗುವುದು ಎಂದರು.
ಹಬ್ಬು ಚಿಟ್ಟೆ ರೈಲ್ವೆ ಸೇತುವೆಯ ಸಮೀಪ ಖಾಸಗಿ ಮಾಲ್ಕಿದಾರರು ಜಮೀನಿಗೆ ಮಣ್ಣು ತುಂಬಿದ್ದು ಮಾಲ್ಕಿದಾರರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. ನಂತರ ಹಳದಿಪುರ ಶಾಲೆಗೆ ಭೇಟಿ ನೀಡಿ ಕಟ್ಟಡದ ಪರಿಶೀಲನೆ ನಡೆಸಿ ಶಾಸಕರ ನಿಧಿಯಿಂದ ಕಟ್ಟಡ ಹಾಗೂ ಮೇಲ್ಛಾವಣಿ ದುರಸ್ತಿ ಮಾಡುವಂತೆ ತಿಳಿಸಿದರು. ಐ.ಆರ್.ಬಿಯಿಂದ ಎಕ್ಸ್ ರೇಷನ್ ಬಗ್ಗೆ ಹೆಚ್ಚಿನ ಮೌಲ್ಯಮಾಪನ ಮಾಡಲು ತಿಳಿಸಿದರು.
ಮೂಡಗಣಪತಿ ಕ್ರಾಸ್ ಬಳಿ ಐ ಆರ್ ಬಿಯಿಂದ ರಸ್ತೆ ಸೂಚನೆ ಹಾಗೂ ಸೂಚನಾ ಫಲಕ ಅಳವಡಿಸಬೇಕು ಜೊತೆಯಲ್ಲಿ ತಾಂತ್ರಿಕ ಭೇಟಿ ಆಗಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ತಿಳಿಸಿದರು. ಅದರಂತೆ ಇಲ್ಲಿಂದ ಕರ್ಕಿ ಶಿಕಾರದವರೆಗೆ ಮಣ್ಣು ತೆಗೆಯುತ್ತಿದ್ದು ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ರವಾನಿಸಲು ತಿಳಿಸಿದರು.
ಸಭೆಯ ಬಳಿಕ ಶೀಘ್ರವಾಗಿ ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಮುಂದಾದ ಅಧಿಕಾರಿಗಳ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.