
ಶಿರಸಿ: ಗುರುಕಾರ್ಯದ ಮಹಾನತೆಯನ್ನು ಅರಿತು ರಾಷ್ಟ್ರ ರಕ್ಷಣೆ, ಧರ್ಮಜಾಗೃತಿ ಮತ್ತು ಸ್ವಂತದ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುವುದು ಪ್ರತಿಯೊಬ್ಬ ಮನುಷ್ಯನ ಪರಮ ಉದ್ದೇಶ. ಆದ್ದರಿಂದ ಜು.18ಕ್ಕೆ ‘ಸಂತರ ಅಮೂಲ್ಯ ಸತ್ಸಂಗ’ ಕಾರ್ಯಕ್ರಮವನ್ನ ಆನ್ಲೈನ್ ನಲ್ಲಿ ಸಂಜೆ 5.30 ರಿಂದ ಏರ್ಪಡಿಸಿದೆ. ಸಂತ ಮಹಾತ್ಮರು ಈ ಉದ್ದೇಶವನ್ನು ಸಾಧ್ಯ ಮಾಡಲು ಸಮಾಜಕ್ಕೆ ಮಾರ್ಗದರ್ಶನವನ್ನು ಮಾಡುತ್ತಾರೆ. ಇಡೀ ಸಮಾಜವನ್ನು ಒಟ್ಟು ಸೇರಿಸಿ ಸಮಾಜ ಮನದಲ್ಲಿ ಗುರುಭಕ್ತಿಯ ಬೀಜವನ್ನು ಬಿತ್ತುವುದಕ್ಕಾಗಿ ಸತತ ಕಾರ್ಯನಿರತರಾಗಿರುತ್ತಾರೆ. ಆನ್ಲೈನ್ ನಲ್ಲಿ ಕಾರ್ಯಕ್ರಮ ವೀಕ್ಷಿಸಲು https://youtu.be/1nMUky6h5IM ಅಲ್ಲದೇ 9343017001, 7204082609 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.