• Slide
    Slide
    Slide
    previous arrow
    next arrow
  • ಮಾ.4ಕ್ಕೆ ಕಿನಾರೆಯ ಧ್ಯಾನ ಕುಟೀರದಲ್ಲಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ

    300x250 AD

    ಭಟ್ಕಳ: ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ಭಟ್ಕಳ ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯ ಧ್ಯಾನ ಕುಟೀರದಲ್ಲಿ ಮಾರ್ಚ 4 ಶುಕ್ರವಾರ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಎಲ್ಲ ಭಕ್ತಾದಿಗಳ ಸಹಕಾರದಿಂದ ವಿಜೃಂಭಣೆಯಿಂದ ನೆರವೇರಲಿದೆ ಎಂದು ನಾಮಧಾರಿ ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಹೇಳಿದರು.

    ಅವರು ಈ ಕುರಿತು ಗುರುಮಠದಲ್ಲಿರುವ ಗುರುಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ ಏ.4 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ರಾಮತಾರಕ ಮಹಾಯಜ್ಞವು ಬೆಂಗಳೂರಿನ ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ಇವರ ನೇತೃತ್ವದಲ್ಲಿ ನಡೆಯುಲಿರುವುದು. ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಸೇರಿ ಸಹಕಾರ ನೀಡಿ ಈ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿದೆ. ಭಟ್ಕಳದ ನಮ್ಮ ಸಮಾಜದವರಲ್ಲದೆ ಇತರ ಸಮಾಜದ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ದೇವರ ಪ್ರಸಾದವನ್ನು ಸ್ವೀಕರಿಸಿ ಶ್ರೀರಾಮ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯರು ಹಾಗೂ ಗುರುಮಠದ ಮಾಜಿ ಅದ್ಯಕ್ಷರಾದ ಡಿ.ಬಿ. ನಾಯ್ಕ ಮಾತನಾಡಿ ಧ್ಯಾನ ಮಂದಿರದ ರ್ಧಂತಿ ಉತ್ಸವಕ್ಕೆ ಭಕ್ತಾಧಿಗಳ ಸಹಕಾರ ಅತ್ಯವಶ್ಯಕವಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದರು.

    300x250 AD

    ಪತ್ರಿಕಾಗೋಷ್ಟಿಯಲ್ಲಿ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪ್ರಮುಖರಾದ ವಾಮನ ನಾಯ್ಕ ಮಂಕಿ, ಎಂ.ಜಿ.ನಾಯ್ಕ, ಕುಮಟಾ, ಹೊನ್ನಾವರದ ಮೋಹನ ನಾಯ್ಕ, ಲಭೋಧರ ನಾಯ್ಕ, ಭಟ್ಕಳ ನಾಮಧಾರಿ ಗುರುಮಠದ ಸದಸ್ಯರಾದ ಎಂ.ಕೆ.ನಾಯ್ಕ,ವೆಂಕಟ್ರಮಣ ನಾಯ್ಕ ಶಾಂತಾರಾಮ ನಾಯ್ಕ, ರಾಘವೇಂದ್ರ ನಾಯ್ಕ,ಗಿರೀಶ ನಾಯ್ಕ, ಗಣೇಶ ನಾಯ್ಕ, ನಾಗೇಂದ್ರ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ
    ಸಮಿತಿಯ ವಿಠ್ಠಲ್ ನಾಯ್ಕ ,ಗಣಪತಿ ನಾಯ್ಕ, ಮತ್ತಿತರರು ಇದ್ದರು.

    ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು.ಗುರುಮಠದ ಕಾರ್ಯದರ್ಶಿ ಮಾಸ್ತಿ ನಾಯ್ಕ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top