ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿ ಚಿಪಗಿ ಚಕ್ ಪೋಸ್ಟ್ ಹತ್ತಿರ ಆಧುನಿಕ ಯಂತ್ರೋಪಕರಣಗಳನ್ನು ಹೊಂದಿದ ಮಲ್ಟಿ ಕಾರ್ ಬ್ರಾಂಡ್ ಸರ್ವಿಸ್ ಘಟಕ ವಿದ್ಯಕ್ತವಾಗಿ ಶುಭಾರಂಭಗೊಂಡಿತು.
ಸರ್ವಿಸ್ ಘಟಕವನ್ನು ಉದ್ಯಮಿ ರಾಜಾರಾಮ ಹೆಗಡೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಾರತೀಯ ಸೇನಾ ಪಡೆಯಲ್ಲಿ 28 ವರ್ಷಗಳ ಕಾಲ ನಿಷ್ಠೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕಕ್ಕೂ ಭಾಜನರಾದ ನಿವೃತ್ತ ಮೇಜರ್ ಅನಂತ ಭಟ್ಟ ಬಪ್ನಳ್ಳಿಯವರನ್ನು ಅವರ ದೇಶ ಸೇವೆಯ ಕಾರ್ಯಕ್ಷಮತೆ ಅರಿತು ಶಾಲು ಹೊದೆಸಿ ಫಲತಾಂಬೂಲ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಅತಿಥಿಗಳಾಗಿದ್ದ ಶಿರಸಿ ಶಕ್ತಿ ಆಯುರ್ವೇದ ಕೇಂದ್ರದ ಪಾರಂಪರಿಕ ವೈದ್ಯ ವಿಶ್ವನಾಥ ಹೆಗಡೆ ಕಡಬಾಳರವರು ಮಾತನಾಡಿ ಇಂದಿನ ಕಾಂಪಿಟೇಶನ್ ಯುಗದಲ್ಲಿ ಗ್ರಾಹಕರಿಗರ ಪ್ರೀತಿಯಾಗುವಂತೆ ಅವರಿಷ್ಟದಂತೆ ಸರಿಯಾಗಿ ಕೆಲಸ ನಿರ್ವಹಿಸಿದಾಗ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಯಾಂತ್ರೀಕೃತ ಈ ಯುಗದಲ್ಲಿ ಗ್ರಾಹಕ ಕೂಡಾ ಕೆಲವೊಂದರಿಂದ ನೆಮ್ಮದಿಯಿಂದ ಬದುಕಲು ಸಹಾಯವಾಗಿದೆ. ಶುಭಾರಂಭದ ನೆನಪಿನಲ್ಲಿ ದೇಶ ರಕ್ಷಣಾ ಸೇವೆಗೈದ ಯೋಧನನ್ನು ಸನ್ಮಾನಿಸಿದ ವಿಷಯ ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಪ್ಪನಳ್ಳಿ ಅನಂತ ಭಟ್ಟರವರು ದೇಶ ರಕ್ಷಣೆಯ ಸೇವೆಯಲ್ಲಿದ್ದಾಗ ನಡೆದ ಕೆಲವೊಂದು ಘಟನೆ,ಅನುಭವ ಮತ್ತು ಆಸಂದರ್ಭದಲ್ಲಿ ಸಹಕರಿಸಿದವರನ್ನು ಸ್ಮರಿಸಿ ಸನ್ಮಾನಕ್ಕೆ ಕೃತಜ್ಞತೆ ತಿಳಿಸಿದರು.
ಅತಿಥಿಗಳಾಗಿದ್ದ ಎಂಜಿನಿಯರ್ ಎಸ್.ಎನ್ ಹೆಗಡೆ,ಸುಬ್ರಾಯ ಹೆಗಡೆ, ಸ್ವಪ್ನಾ ಇಂಡಸ್ಟ್ರೀಯ ಪಿ.ವಿ. ಭಟ್ಟ, ಇಂಡಿಯಾ ಲಿಮಿಟೆಡ್ ನ ರೀಜನಲ್ ಮೆನೆಜರ್ ರಾಘವೇಂದ್ರ ಉಡುಪಿ,ವೆಂಕಟ್ರಮಣ ಹೆಗಡೆ ಬಾಳೆಕೊಪ್ಪ, ಗಣಪತಿ ಹೆಗಡೆ ಹಿರೆಹದ್ದ ರವರು ಶುಭ ಹಾರೈಸಿದರು.
ಪ್ರಗತಿ ಮೋಟಾರ್ಸ್ನ ಮುಖ್ಯಸ್ಥ ಪ್ರಕಾಶ ಹೆಗಡೆ ಹಿರೇಹದ್ದರವರು ಸ್ವಾಗತಿಸಿ ಪ್ರಾಸ್ಥಾವಿಕ ಮಾತಿನಮೂಲಕ ಸರ್ವಿಸ್ ಸೆಂಟರಿನ ಧ್ಯೇಯೋದ್ದೇಶದ ಕುರಿತಾಗಿ ವಿವರಿಸಿದರು. ನಿಧಿ ಹೆಗಡೆ ಮತ್ತು ಪ್ರಜ್ಞಾ ಹೆಗಡೆ ಆರಂಭದಲ್ಲಿ ಪಾರ್ಥಿಸಿದರೆ ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು ವೇದಿಕೆಯಲ್ಲಿ ಪ್ರಗತಿಯ ಮುಖ್ಯಸ್ಥ ಪ್ರವೀಣ ಹೆಗಡೆ ಬಾಳೆಕೊಪ್ಪ ಉಪಸ್ಥಿತರಿದ್ದರು. ಕು. ಸಿಂಧೂ ಭಟ್ಟ ಕೊನೆಯಲ್ಲಿ ವಂದಿಸಿದರು.