ಕಾರವಾರ: ತಾಲೂಕಿನ ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದಿಂದ ನಗರದ ನಗರಸಭಾ ಉದ್ಯಾನವನದಲ್ಲಿ ಶಿವಾಜಿ ಪ್ರತಿಮೆಗೆ ಹೂ ಹಾರ ಹಾಕಿ ಅಲಂಕರಿಸಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯನ್ನು ವೈಭವ ಪೂರಿತವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕರ್ತರಿಂದ “ಜೈ ಭವಾನಿ ಜೈ ಶಿವಾಜಿ ” ಜಯ ಘೋಷ ಮೊಳಗಿತು.
ಪ್ರಮುಖರಾದ ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ಉಪಾಧ್ಯಕ್ಷ ಶ್ರೀ ಪಿ.ಪಿ.ನಾಯ್ಕ, ಮನೋಜ ಭಟ್, ಶಿವಾನಂದ ಕದಂ, ಎಮ್.ಆರ್. ನಾಯ್ಕ ರವರು ಶಿವಾಜಿ ಮಹಾರಾಜರ ಜೀವನ ಚರಿತ್ರೆ ಹಾಗು ಶೌರ್ಯ ಹಾಗು ಸಾಹಸವನ್ನು ಕೊಂಡಾಡಿದರು.
ಜಯಂತಿ ಆಚರಣೆಯಲ್ಲಿ ನಗರಾಧ್ಯಕ್ಷ ನಾಗೇಶ ಕುರ್ಡೇಕರ ಸ್ಥಾಯಿ ಸಮೀತಿ ಅಧ್ಯಕ್ಷೆ ಸುಜಾತಾ ತಾಮಸೆ ಹಿರಿಯರಾದ ಅಶೋಕ ಕಾಮತ್, ರಾಜೇಶ ನಾಯ್ಕ ಸಿದ್ದರ ಉದಯ ಬಶೆಟ್ಟಿ ಕಿಶನ್ ಕಾಂಬಳೆ ಸೇರಿದಂತೆ ನಗರ ಸಭಾ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಬಿಜೆಪಿ ಎಲ್ಲಾ ಮೋರ್ಚಾ ಪದಾಧಿಕಾರಿಗಳು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.