• Slide
  Slide
  Slide
  previous arrow
  next arrow
 • ಜನ ಮನ ಸೂರೆಗೊಂಡ ನೂಪುರನಾದ ನೃತ್ಯೋತ್ಸವ

  300x250 AD

  ಶಿರಸಿ: ನೂಪುರ ನೃತ್ಯ ಶಾಲೆಯ ವಾರ್ಷಿಕ ನೃತ್ಯೋತ್ಸವ ಫೆ.19 ರ ಶನಿವಾರದಂದು ಟಿ ಎಂ ಎಸ್ ಸಭಾಭವನ ದಲ್ಲಿ ಯಶಸ್ವಿಯಾಗಿ ಜರುಗಿತು.

  ಎಂ ಇ ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

  ಅವರು ಮಾತನಾಡುತ್ತಾ ನಮ್ಮ ದೇಶದ ಪಾರಂಪರಿಕ ಕಲೆ ಭರತನಾಟ್ಯ ವನ್ನು ಉಳಿಸಲು ತಮ್ಮ ಸಹಕಾರ ಯಾವತ್ತೂ ಇದೆ, ಪಾಲಕರುಕೂಡ ಇಂತಹ ಶಾಸ್ತ್ರೀಯ ಕಲೆಗಳನ್ನು ಪೋಷಿಸಲು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.

  300x250 AD

  ನೂಪುರ ಸಂಸ್ಥೆಯ ಸಂಸ್ಥಾಪಕ ಎಸ್ ಎನ್ ಜೋಶಿ ಮಕ್ಕಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಪುಷ್ಪoಜಲಿ, ಗಣೇಶ ಸ್ತುತಿ, ಅಲರಿಪು, ಜತಿಸ್ವರ, ಶಿವ ಪಂಚಾಕ್ಷರಿ ಸ್ತೋತ್ರ, ರಂಜನಿ ಮಾಲಾ, ಭಜನ್, ಅಷ್ಟಲಕ್ಷ್ಮಿ ಸ್ತೋತ್ರ, ಪಾರ್ಕಡಲ್ ದಶವತಾರ, ತಿಲ್ಲಾನ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು.

  ಅನುರಾಧಾ ಹೆಗಡೆ ನೃತ್ಯ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿoದ ಭರತನಾಟ್ಯ ಪ್ರದರ್ಶನ ನಡೆಯಿತು. ನಟ್ಟುವಾಂಗದಲ್ಲಿ ವಿದುಷಿ ಅನುರಾಧಾ ಹೆಗಡೆ ಹಾಗೂ ಕುಮಾರಿ ಕೀರ್ತನ ಹೆಗಡೆ, ಹಾಡುಗಾರಿಕೆ ಯಲ್ಲಿ ವಿದುಷಿ ಶ್ರೀಮತಿ ಹರಿಣಿ ಶ್ರೀಧರ್, ಮೃದಂಗ ದಲ್ಲಿ ವಿದ್ವಾನ್ ನಾಗರಾಜ್ ಹಾಗೂ ವಯೋಲಿನಲ್ಲಿ ವಿದ್ವಾನ್ ದಯಾಕರ್ ಸಹಕರಿಸಿದರು. ವಿದುಷಿ ಅನುರಾಧಾ ಹೆಗಡೆ ಸ್ವಾಗತಿಸಿದರು, ವೀಣಾ ಭಟ್ ಕಾರ್ಯಕ್ರಮ ನಿರೂಪಿಸಿದರು, ರಾಮಚಂದ್ರ ಹೆಗಡೆ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top