ಅಂಕೋಲಾ: ಪಟ್ಟಣದ ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ದ್ರೋಣ ರತ್ನ ಪ್ರಶಸ್ತಿ 2022 ವಿಜೇತ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವ್ಯಕ್ತಿಗೆ ನೀಡುವ ಸನ್ಮಾನ ಅಥವಾ ಪ್ರಶಸ್ತಿಗಳು ಅವನು ಮಾಡುವ ಕಾರ್ಯಕ್ಕೆ ವಿನ: ಅಹಂಗಾಗಿ ಅಲ್ಲ. ಹಾಗಾಗಿ ಬರುವ ಪ್ರಶಸ್ತಿಗಳಿಂದ ಕಾರ್ಯವೃದ್ಧಿ ಮಾಡಿಕೊಂಡು ಇನ್ನಷ್ಟು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಸಂಸ್ಥೆ ನೀಡಿದ ಗೌರವದಿಂದಾಗಿ ಕೆಲಸ ಮಾಡುವ ಹುಮ್ಮಸ್ಸನ್ನು ದ್ವಿಗುಣಗೊಳ್ಳಿಸಿದೆ. ತನಗೆ ಬಂದಿರುವ ಈ ಪ್ರಶಸ್ತಿಯ ಶ್ರೇಯ ಸಂಸ್ಥೆಯ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಲ್ಲಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಇ. ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಡಿ.ಎಲ್.ಭಟ್ಕಳ ಅವರು ಪ್ರಶಸ್ತಿಗಳ ಮೂಲಕ ಸಂಸ್ಥೆಗಳಿಗೆ ಶ್ರೇಯಬರುತ್ತವೆ. ಪ್ರತಿಯೊಬ್ಬರು ಉತ್ತಮ ಕಾರ್ಯಗಳ ಮೂಲಕ ಪ್ರಶಸ್ತಿಗಳಿಗೆ ಬಾಜನರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ಲೋರಿಯಾ ಮೊಸೆಸ್ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಮಂಜುನಾಥ ಇಟಗಿ ಸ್ವಾಗತಿಸಿದರು.
ವೇದಿಕೆಯಲ್ಲಿಸದಸ್ಯ ಮೀನಲ್ ನಾರ್ವೇಕರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು ಅಭಿನಂದಿಸಿದರು.ಉಪನ್ಯಾಸಕಿ ಡಾ. ಪುಷ್ಪ ನಾಯ್ಕ ವಂದಿಸಿದರು. ಪೂರ್ವಿ ಹಳ್ಗೇಕರ ನಿರೂಪಿಸಿದರು.