• Slide
    Slide
    Slide
    previous arrow
    next arrow
  • ಕ್ಷೇತ್ರದ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇನೆ; ದಿನಕರ ಶೆಟ್ಟಿ

    300x250 AD

    ಕುಮಟಾ: ನಗರದ ಬಗ್ಗೋಣದ ಕೆಲವು ನಿವಾಸಿಗಳಿಗೆ ಅವರ ವಾಸಸ್ಥಳದ ಇ ಸ್ವತ್ತು ಮಾಡಿ ಪತ್ರ ವಿತರಿಸಲಾಯಿತು.

    ಬಗ್ಗೋಣದ ಜನತಾ ಫ್ಲಾಟ್ ನ 21 ನಿವಾಸಿಗಳಿಗೆ ಇ ಸ್ವತ್ತು ವಿತರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಪಾರದರ್ಶಕ ವಾಗಿ ಜನರಿಗೆ ಅವರ ಸಮಸ್ಯೆ ಬಗೆಹರಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ನಾನು ಶಾಸಕನಾದಾಗಿಂದ ಮಾಡುತ್ತ ಬಂದಿದ್ದೇನೆ. ಈ ಭಾಗದ ಪ್ರಮುಖರಾದ ಕಿಶನ್ ವಾಳ್ಕೆ, ಇಲ್ಲಿಯ ಸದಸ್ಯೆ ಶೈಲಾ ಗೌಡ ಹಾಗೂ ಸಾರ್ವಜನಿಕರು ತಾವು ವಾಸವಿರುವ ಫ್ಲಾಟ್ ಗಳನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಕೇಳಿಕೊಂಡಾಗ ನಾನು ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ, ಅರಣ್ಯ ಅಧಿಕಾರಿ, ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿ ಈ ಜಾಗ ಅರಣ್ಯ ಇಲಾಖೆ ಇಂದ ಕೈಬಿಡಲಾಗಿದೆ ಎಂದರು.

    ನಿಮಗೆಲ್ಲ ಹಕ್ಕು ಪತ್ರ ಒಂದೂವರೆ ವರ್ಷದ ಹಿಂದೆಯೇ ವಿಸ್ತರಿಸಿದ್ದೆ ನಂತರ ಇ ಸ್ವತ್ತು ಮಾಡಿಕೊಡಬೇಕು ಎಂದು ಮತ್ತೆ ಕೂಗು ಕೇಳಿಬಂದಾಗ ನಾನು ಕಿಶನ್ ವಾಳ್ಕೆ, ಶೈಲಾ ಗೌಡ ಎ ಸಿ ಯವರನ್ನು ಭೇಟಿ ಆಗಿ ಮಾತುಕತೆ ನಡೆಸಿ ಪುರಸಭಾ ಅಧ್ಯಕ್ಷ ಮೋಹಿನಿ ಗೌಡ ಮತ್ತು ಮುಖ್ಯಾಧಿಕಾರಿ ಸುರೇಶ ರವರೂ ಕೂಡ ತಮ್ಮ ಕಡೆಯಿಂದ ಎಲ್ಲ ಕಾಗದ ಪತ್ರ ಮಾಡಿಕೊಟ್ಟು ನಂತರ ಎಲ್ಲ ತೊಡಕುಗಳನ್ನು ನಿವಾರಿಸ ಇಂದು ಈ ಸ್ವತ್ತು ಪತ್ರ ನಿಮ್ಮ ಕೈಗೆ ನೀಡಿದ್ದೇನೆ ಈ ಸ್ವತ್ತು ಇಡೀ ರಾಜ್ಯಾದ್ಯಂತ ದೊಡ್ಡ ಭೂತದಂತೆ ಕಾಡುತ್ತಿದೆ ಅದನ್ನು ಮಾಡಿಕೊಡಲು ಲಕ್ಷ ಲಕ್ಷ ಹಣವನ್ನೂ ಪೀಕುವವರೂ ಇದ್ದಾರೆ. ನಾನು ಶಾಸಕ ನಾದ ನಂತರ ಅನೇಕ ಕಡೆಗಳಲ್ಲಿ ಕಾನೂನಿನ ಅಡಿಯಲ್ಲಿ ಸಾಧ್ಯ ವಾದಷ್ಟು ಜನರಿಗೆ ಇ ಸ್ವತ್ತು ಮಾಡಿಸಿಕೊಡಲಾಗಿದೆ ಆದರೆ ಹಣ ತಗೊಂಡು ಮಾಡಿಕೊಡುವ ಕೆಳಮಟ್ಟದ ಮನಸ್ಥಿತಿ ನನ್ನದಲ್ಲ.. ಹಾಗಾಗಿ ಈ ಇಲ್ಲಿ ನೀವೆಲ್ಲ ಪತ್ರ ಪಡೆದುಕೊಂಡಿದ್ದೀರೆ ಯಾರಾದರೂ ಹಣ ನೀಡಿದ್ದೀರಾ? ಅಥವಾ ಒಂದು ತಿರುಗಾಟವಾದರೂ ನಿಮಗೆ ಮಾಡಿಸಿದ್ದೇವಾ? ಎಂದು ಜನರನ್ನು ಪ್ರಶ್ನಿಸಿದರು.

    ಬಿಜೆಪಿ ಸರ್ಕಾರ ಜನರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ.. ಸೂರು ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ಕಾರ್ಯಪೃವರ್ತವಾಗಿದೆ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ನೀಡುತ್ತಿದೆ, ಕೃಷಿ ಮಾಡುವ ರೈತರಿಗೆ ವಾರ್ಷಿಕ ಹತ್ತು ಸಾವಿರ ರೂಪಾಯಿ ನೇರವಾಗಿ ಖಾತೆಗೆ ಜಮಾ ಆಗುತ್ತಿದೆ.. ನಿಮ್ಮ ಭಾಗದಲ್ಲಿಯೂ ಇಷ್ಟೆಲ್ಲಾ ರಸ್ತೆಗಳು ನಿರ್ಮಾಣ ಆಗಿದೆ ಆದ್ದರಿಂದ ಇಷ್ಟೆಲ್ಲ ಅನುಕೂಲ ಮಾಡಿಕೊಠುತ್ತಿರುವ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದರು.

    ಉದ್ಯಮಿ ಕಿಶನ್ ವಾಳ್ಕೆ ಮಾತನಾಡಿ ನಮ್ಮ ವಿನಂತಿಗೆ ಕೂಡಲೇ ಸ್ಪಂದಿಸಿ ಈ ಭಾಗದ ಅತಿಕ್ರಮಣ ದಾರರಿಗೆ ಒಂದೂವರೆ ವರ್ಷದ ಹಿಂದೆಯೇ ಹಕ್ಕು ಪತ್ರ ವಿತರಿಸಿ ಈಗ ಇ ಸ್ವತ್ತು ಕೂಡ ಮಾಡಿ ಕೊಟ್ಟಿದ್ದೀರಿ ಆದ್ದರಿಂದ ಅಭಿವೃದ್ಧಿ ಯ ಹರಿಕಾರರಾದ ನಿಮ್ಮನ್ನು ಅಭಿನಂದಿಸುತ್ತೇವೆ ಹಾಗೂ ಯಾವುತ್ತೂ ನಾವು ನಿಮ್ಮ ಜೊತೆ ಇರುತ್ತೇವೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವಂತೆ ಮನವಿ ಮಾಡುತ್ತೇನೆ ಎಂದರು.

    300x250 AD

    ಪುರಸಭೆ ಮುಖ್ಯಾಧಿಕಾರಿ ಸುರೇಶ ರವರು ಮಾತನಾಡಿ ಈ ಭಾಗದ ಚಿತ್ರಣವೇ ನನಗೆ ಗೊತ್ತಿರಲಿಲ್ಲ ಈ ಭಾಗದ ಸದಸ್ಯರಾದ ಶೈಲಾ ಗೌಡರವರು ನಮಗೆ ಎಲ್ಲ ದಾಖಲೆಗಳನ್ನು ತುಂಬಾ ದಿನ ಓಡಾಡಿ ಮಾಡಿಸಿ ತಂದು ಕೊಟ್ಟರು ನಂತರ ಇದಕ್ಕೆ ಸಂಬಂಧಪಟ್ಟ ನಕ್ಷೆಯನ್ನು ಶಾಸಕರು ಒದಗಿಸಿಕೊಟ್ಟರು ಒಟ್ಟಾರೆ ಶಾಸಕರು ನಿಮ್ಮ ಸಮಸ್ಯೆ ಗೆ ಸ್ಪಂದಿಸಿ ನಿಮಗೆ ಜಾಗವನ್ನು ನಿಮ್ಮ ಹೆಸರಿಗೆ ಆಗುವಂತೆ ಮಾಡಿ ಕೊಟ್ಟಿದ್ದಾರೆ ಎಂದರು.

    ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ಬಗ್ಗೋಣದ ಎಸಿ ಕೇರಿಯ ಸಮಸ್ಯೆ ಹಾಗೂ ಸ್ಮಶಾನಕ್ಕೆ ಹೋಗಲು ರಸ್ತೆ ನಿರ್ಮಿಸುವ ಬಗ್ಗೆ ಗಮನ ಸೆಳೆದರು.

    ಯುವ ಬ್ರಿಗೇಡ್ ನ ಅಣಪ್ಪ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕೊನೆಯಲ್ಲಿ ವಂದಿಸಿದರು.ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಪುರಸಭಾ ಸದಸ್ಯ ತುಳಸು ಗೌಡ ಉಪಸ್ಥಿತರಿದ್ದರು.

    ಕಾರ್ಯಕ್ರಮ ದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಹಿಂದುಳಿದ ಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ, ಉಮೇಶ ನಾಯ್ಕ, ಗಿರೀಶ್ ಭಟ್ಟ, ಆದಿತ್ಯ ಶೇಟ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top