ಭಟ್ಕಳ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಸಿಂಡಿಕೇಟ್ ಸದಸ್ಯರಾಗಿ ಭಟ್ಕಳ ಅಂಜುಮನ್ ಪದವಿ ಕಾಲೇಜು ಮತ್ತು ಪಿಜಿ ಸೆಂಟರ್ ನ ಪ್ರಾಂಶುಪಾಲ ಎಂ.ಕೆ ಶೇಖ್ ನಾಮನಿರ್ದೇಶನಗೊಂಡಿದ್ದಾರೆ.
ಪ್ರೊಫೆಸರ್ ಎಂ.ಕೆ ಶೇಖ್ ಅವರನ್ನು ವಿಶ್ವವಿದ್ಯಾನಿಲಯ ಕಾಯ್ದೆ 2000 ಸೆಕ್ಷನ್ 30 (1) ಅಡಿಯಲ್ಲಿ ಮತ್ತು ಗೌರವಾನ್ವಿತ ಕುಲಪತಿಗಳ ಆದೇಶದಂತೆ ನಾಮನಿರ್ದೇಶನ ಮಾಡಲಾಗಿದೆ. ಸಿಂಡಿಕೇಟ್ ಸದಸ್ಯರಾಗಿ ಪ್ರಾಂಶುಪಾಲ ಎಂ.ಕೆ.ಶೇಖ್ ಅವರು ಮುಂದಿನ ಎರಡು ವರ್ಷಗಳ ಕಾಲ ಧಾರವಾಡ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸೇವೆ ಸಲ್ಲಿಸಲಿದ್ದಾರೆ.