ಶಿರಸಿ: ಸಾಹಿತ್ಯ ಸಂಚಲನ ಶಿರಸಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲೆ ಇವರ ಸಹಯೋಗದೊಂದಿಗೆ ಬನವಾಸಿ ರಸ್ತೆಯ ‘ತವರುಮನೆ’ ಯಲ್ಲಿ ಆಲೆಮನೆ ಹಬ್ಬದ ಜೊತೆಗೆ ಚುಟುಕು ಕವಿಗೋಷ್ಠಿ ನಡೆಯಿತು.
ಜಿ. ಎ. ಹೆಗಡೆ ಸೋಂದಾ ಪ್ರಾಸ್ತಾವಿಕ ನುಡಿಗಳನ್ನಾಡಿ ಶ್ರೇಷ್ಠ ವಾದ ಮನಸ್ಸೇ ಸುಮನಸು, ಆಲೆಮನೆಯ ಸವಿಯ ಜೊತೆ ಸಾಹಿತ್ಯದ ಸವಿ ಹಂಚಿದ್ದು ಖುಷಿ ಇದೆ ಎಂದರು.
ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾಗಿ ಸೇವೆ ಸಲ್ಲಿಸಿ ಸಮಾಜ ಸೇವೆ ಯಲ್ಲಿ ತೊಡಗಿಕೊಂಡಿರುವ ಮಂಜುನಾಥ ಹೆಗಡೆ ಹುಡ್ಲಮನೆ ಅವರಿಗೆ ತವರುಮನೆ ಎಸ್ಟೇಟ್ ವತಿಯಿಂದ ‘ಜೀವನ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
‘ತವರುಮನೆ’ ಮುಖ್ಯಸ್ಥರಾದ ಸುರೇಶ ಹೆಗಡೆ ಹಾಗೂ ರೇಖಾ ಹೆಗಡೆ ಮಾತನಾಡಿ ಸಾಹಿತ್ಯದ ಆಸಕ್ತರಿಗೆ ತವರುಮನೆಯಲ್ಲಿ ಅವಕಾಶ ಕಲ್ಪಿಸುವ ಆಲೋಚನೆ ಇದೆ. ತವರು ಮನೆ ಎನ್ನುವುದು ಬಾಂಧವ್ಯದ ಸಂಕೇತ ತಮ್ಮ ಸೇವೆ ಸಾಹಿತ್ಯಕ್ಕೆ ಸದಾ ಇದೆ ಎಂದರು.
ಸುರೇಶ ಹೆಗಡೆ ಸೋಂದಾ ತಮ್ಮ ವಿವಾಹ 25 ನೆ ವಾರ್ಷಿಕೋತ್ಸವ ನಿಮಿತ್ತ ಚುಟುಕು ಕವಿಗೋಷ್ಠಿ ಆಯೋಜಿಸಿ ಸಾಹಿತ್ಯ ಸೇವೆಗೆ ಅವಕಾಶ ನೀಡಿದ್ದು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಸುರೇಶ ಹೆಗಡೆ ರೇಖಾ ದಂಪತಿಗಳನ್ನು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ ಹೆಗಡೆ ಹುಡ್ಲಮನೆ, ಡಿ. ಎಂ. ಭಟ್ ಕುಳುವೆ, ಗಣಪತಿ ಭಟ್ಟ ವರ್ಗಾಸರ, ಜಿ. ಎ. ಹೆಗಡೆ ಸೋಂದಾ ಸಾಹಿತ್ಯ ಸಂಚಲನ ಶಿರಸಿ ಸಂಚಾಲಕ ಕೃಷ್ಣ ಪದಕಿ, ಮಹೇಶ್ ಹನಕೆರೆ ಉಪಸ್ಥಿತರಿದ್ದರು. ಇಪ್ಪತ್ತಕ್ಕೂ ಹೆಚ್ಚು ಕವಿಗಳು ಚುಟುಕು ವಾಚಿಸಿದರು. ವಿಮಲಾ ಭಾಗ್ವತ್ ಪ್ರಾರ್ಥಿಸಿದರು, ಮನೋಹರ ಮಲ್ಮನೆ ಸ್ವಾಗತಿಸಿದರು, ಜಿ. ಎ. ಹೆಗಡೆ ಸೋಂದಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಸ್ಥಿತರಿದ್ದರು. ಪ್ರತಿಭಾ ಫಾಯ್ದೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ವಿವಿಧ ವನಸ್ಪತಿಗಳ ಪರಿಚಯವನ್ನು ನಾಟಿವೈದ್ಯ ಮಂಜುನಾಥ ಹೆಗಡೆ ಸಭಿಕರಿಗೆ ಮಾಡಿಕೊಟ್ಟರು.