• Slide
  Slide
  Slide
  previous arrow
  next arrow
 • ಶಾಸಕ ಸುನೀಲ್ ವಿರುದ್ಧ ಮಾಜಿ ಶಾಸಕ ಮಂಕಾಳು ವೈದ್ಯ ವಾಗ್ದಾಳಿ

  300x250 AD

  ಹೊನ್ನಾವರ: ಕಾಸರಕೋಡ ವಾಣಿಜ್ಯ ಬಂದರು ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ಎರಡು ಮುಖ ಎರಡು ನಾಲಿಗೆಯನ್ನು ಹೊಂದಿರುವ ರಾಜ್ಯದ ಏಕೈಕ ಶಾಸಕ ಸುನೀಲ್ ನಾಯ್ಕ ಮಾತ್ರ. ಅವರ ಬಿಟ್ಟರೆ ಇಲ್ಲಿ ಯಾವ ಮಾಜಿ ಶಾಸಕರಿಗೂ ಇಲ್ಲಾ. ಒಂದು ನಾಲಿಗೆ ಇದ್ದವನಾದರೆ ತಕ್ಷಣ ಅಲ್ಲಿ ಹೋಗಿ ಬಂದ್ ಮಾಡಿಸಬೇಕು ಒಂದು ಮನೆ ಒಂದು ಮರ ಹೋಗಲು ಕೊಡಬಾರದು ಸುಳ್ಳಿನ ಸರದಾರ್ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಟೀಕಿಸಿದರು,
  ಅವರು ಹೊನ್ನಾವರ ಪಟ್ಟಣದ ಖಾಸಗಿ ಹೋಟೇಲನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಕೋಡ ಬಂದರು ಅಭಿವೃದ್ಧಿಗೆ 2010 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷ್ಣ ಪಾಲೇಮಾರ್ ಅವರು ಬಂದರು ಇಲಾಖೆ ಸಚಿವರಿದ್ದಾಗ 10 ಎಕರೆ ಜಾಗ ಮಾತ್ರ ಮಂಜೂರಿಯಾಗಿತ್ತು. ಆ ಸಂದರ್ಭದಲ್ಲಿ ಮೀನುಗಾರ ಮನೆಗಳಿಗೆ ಮತ್ತು ಅವರ ಬದುಕಿಗೆ ಯಾವುದೇ ತೊಂದರೆಯಾಗದಂತೆ ಬಂದರು ಅಭಿವೃದ್ಧಿ ಮಾಡುವ ಷರತ್ತಿನ ಅನ್ವಯ 2017 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಮೀನುಗಾರರ ಸಮ್ಮುಖದಲ್ಲಿ ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದಾರೆ.
  ಆದರೆ ನಂತರ ಈ ಕಂಪನಿಗೆ ಹೆಚ್ಚಿನ ಭೂಮಿಯನ್ನು ಮತ್ತು ಹೆಚ್ಚಿನ ಅನುದಾನವನ್ನು ನೀಡಿ ಕಾಸರಕೋಡ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ರಸ್ತೆ ನಿರ್ಮಾಣದ ಹೆಸರಿನಲ್ಲಿ ತೆಂಗಿನ ಮರಗಳನ್ನು ಕಡಿಯುತ್ತಿದ್ದಾರೆ. ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಇದು ಇಷ್ಟಕ್ಕೆ ನಿಲ್ಲದೆ ಮಂಕಿ ಅನಂತವಾಡಿಯ ಹತ್ತಿರ 150 ಎಕ್ಕರೆ ಜಾಗ ಶಿಲೆಕಲ್ಲಿಗಾಗಿ ಲೀಸೀಗೆ ತಗೆದು ಕೋಳ್ಳುತ್ತಿದ್ದಾರೆ ಶಾಸಕರು ಮತ್ತು ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
  ಸರ್ಕಾರದ ಜಾಗದಲ್ಲಿ ಮನೆ ಕಟ್ಟಿಕೊಂಡವರನ್ನು ತೆರವುಗೊಳಿಸುವ ಅಧಿಕಾರ ನಮಗಿದೆ ಎಂದು ಶಾಸಕರಿಬ್ಬರು ಹೇಳಿಕೊಂಡಿದ್ದಾರೆ. ಇವತ್ತು ಅವರಿಬ್ಬರನ್ನು ಶಾಸಕರನ್ನಾಗಿ ಮಾಡಿದ್ದು ಕ್ಷೇತ್ರದ ಜನರು. ಅವರಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ಸುಮಾರು 25 ಸಾವಿರ ಜನರು ಹಲವು ದಶಕಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಡವರೂ ಇದ್ದಾರೆ. ಇಂಥವರನ್ನು ಒಕ್ಕಲೆಬ್ಬಿಸುವ ಮಾತನಾಡುತ್ತಿರುವ ಶಾಸಕರಿಗೆ ಮಾನವೀಯತೆಯಿಲ್ಲ.
  ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ 1700 ಕೋಟಿ ರೂ. ಅನುದಾನ ತಂದಿರುವುದನ್ನು ಒಪ್ಪಿಕೊಂಡಿರುವ ಸುನೀಲ್ ನಾಯ್ಕ ತಾನು 300 ಕೋಟಿ ರೂ. ತಂದಿದ್ದೇನೆ, ಸೇತುವೆ ತಂದಿದ್ದೇನೆ ಎಂದೆಲ್ಲ ಹೇಳುತ್ತಾರೆ. ಎಲ್ಲಿದೆ ಅವರು ತಂದಿರುವ ಕಾಮಗಾರಿ ತೋರಿಸಲಿ. ಸುಳ್ಳು ಹೇಳುವುದನ್ನು ಮತ್ತು ಸುಳ್ಳು ಮಾಹಿತಿ ಕೊಡುವುದನ್ನು ನಿಲ್ಲಿಸಬೇಕು. ನನ್ನ ಅವಧಿಯಲ್ಲಿ ಸಾವಿರಾರು ಮನೆಗಳನ್ನು ಕೊಡಿಸಿದ್ದೇನೆ. ನೂರಾರು ಜನರಿಗೆ ಹಕ್ಕುಪತ್ರವನ್ನು ಕೊಡಿಸಿದ್ದೇನೆ. ಇವರಿಗೆ ಒಂದು ಹಕ್ಕುಪತ್ರ ಕೊಡಿಸುವ ಯೋಗ್ಯತೆಯಿಲ್ಲ. ನಾವೆಲ್ಲ ಕಾಸರಕೋಡ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅವರ ರಕ್ಷಣೆಗೆ ನಿಲ್ಲುತ್ತೇವೆ ಎಂದು ಹೇಳಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top