ಸಿದ್ದಾಪುರ: ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಹಾಗೂ ಸ್ನೇಹಿತರ ಬಳಗದವರಿಂದ ಪಿ.ವಿ.ಹೆಗಡೆ ಹೊಸಗದ್ದೆ ಅವರ ಮನೆ ಅಂಗಳದಲ್ಲಿ ದೇವತಾರಾಧನೆ ಪ್ರಯುಕ್ತ ಡಿ.ಜಿ.ಹೆಗಡೆ ಮತ್ತಿಗಾರ ಇವರ ನೆನಪಿನ ವೇದಿಕೆಯಲ್ಲಿ ಫೆ.21ರಂದು ರಾತ್ರಿ 8.30ರಿಂದ ಅಭಿನಂದನೆ-ಹಿರಿಯರ ನೆನಪು ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಯಕ್ಷಗಾನ ಕಲಾವಿದ ಹಾಗೂ ಸಂಘಟಕ ಮಹಾಬಲೇಶ್ವರ ಇಟಗಿ ಅವರನ್ನು ಅಭಿನಂದಿಸಲಾಗುತ್ತದೆ. ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ತಾಪಂ ಮಾಜಿ ಅಧ್ಯಕ್ಷ ಸುಧೀರ್ ಬಿ.ಗೌಡರ್, ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ, ಪ್ರಗತಿಪರ ಕೃಷಿಕರಾದ ಸುಬ್ರಾಯ ಹೆಗಡೆ ಮತ್ತಿಗಾರ, ಡಿ.ಕೆ.ನಾಯ್ಕ ತೆಂಗಿನಮನೆ ಉಪಸ್ಥಿತರಿರುತ್ತಾರೆ.
ನಂತರ ಲವ-ಕುಶ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು ಹಿಮ್ಮೇಳದಲ್ಲಿ ಎಂ.ಪಿ.ಹೆಗಡೆ ಉಳ್ಳಾಳಗದ್ದೆ, ಶ್ರೀಪಾದ ಭಟ್ಟ ಮೂಡಗಾರ, ಉಮೇಶ ಹೆಗಡೆ ಉಮ್ಮಚಗಿ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಪಿ.ವಿ.ಹೆಗಡೆ ಹೊಸಗದ್ದೆ, ಮಹಾಬಲೇಶ್ವರ ಇಟಗಿ, ಬಾಬಣ್ಣ ಬಿಳೆಕಲ್, ಪ್ರಶಾಂತ ಹೆಗಡೆ ಗೋಡೆ, ಪುರುಷೋತ್ತಮ ಹೆಗಡೆ ಮುಗದೂರು, ಎಂ.ಜಿ.ಭಟ್ಟ ದೇವಕಾರ್, ಪ್ರಸನ್ನ ಹೆಗಡೆ ಹೊಸಗದ್ದೆ, ಅಭಯ ಹೆಗಡೆ, ಪ್ರಥ್ವಿ ನಾಯ್ಕ, ಭೂಮಿಕಾ ಹೆಗಡೆ, ಆದಿತ್ಯ ಹೆಗಡೆ, ಅಮಿತ್ ಭಟ್ಟ, ಸ್ಕಂದ ಹೆಗಡೆ ಪಾತ್ರ ನಿರ್ವಹಿಸಲಿದ್ದಾರೆ.