• Slide
    Slide
    Slide
    previous arrow
    next arrow
  • 7 ದಿನಗಳ ಜೇನು ಕೃಷಿ ತರಬೇತಿ ಕಾರ್ಯಕ್ರಮಕ್ಕೆ ಸುರೇಶ್ಚಂದ್ರ ಕೆಶಿನ್ಮನೆ ಚಾಲನೆ

    300x250 AD

    ಶಿರಸಿ :ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಜೇನು ಅಭಿವೃದ್ಧಿ ಮಂಡಳಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿರಸಿ ಮತ್ತು ಧಾರವಾಡ,ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ನಿ., ಧಾರವಾಡದ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶಿರಸಿ ತಾಲೂಕಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಫೆ.19 ರಿಂದ 25 ರೆ ವರೆಗೆ ನಡೆಯುವ 7 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ದೀಪ ಬೆಳಗುವ ಮೂಲಕ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    7 ದಿನಗಳ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಹಿಂದಿನ ಕಾಲದಿಂದಲೂ ನಾವು ಹೈನುಗಾರಿಕೆಯನ್ನು ನಡೆಸಿಕೊಂಡು ಬಂದಿದ್ದು, ನಾವು ಹೈನುಗಾರಿಕೆಯ ಬಗ್ಗೆ ಅರಿಯುವ ವಿಷಯಗಳು ಸಾಕಷ್ಟಿದ್ದು ವೈಜ್ಞಾನಿಕ ನಿರ್ವಹಣೆಯ ಕೊರೆತೆಯಿಂದ ಹೈನುಗಾರಿಕೆ ಲಾಭದಾಯಕವಲ್ಲ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿತ್ತು ಆದರೇ ಈಗಿನ ದಿನಗಳಲ್ಲಿ ನಾವು ಹೈನುಗಾರಿಕೆಯನ್ನು ಹೇಗೆ ಲಾಭದಾಯಕ ಮಾಡಬಹುದು ಎಂಬುದರ ಕುರಿತು ವೈಜ್ಞಾನಿಕವಾಗಿ ಮಾಹಿತಿ ತರಬೇತಿಯನ್ನು ಪಡೆದು ಅದಕ್ಕೆ ತಕ್ಕಂತೆ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಹೈನೋದ್ಯಮದಿಂದ ಇನ್ನೂ ಉತ್ತಮ ಪಡಿಸಿಕೊಳ್ಳಬುದಾಗಿದೆ ಎಂಬುದನ್ನು ಈಗಿನ ಜನರು ಅರಿತಿದ್ದು, ಅದೇ ರೀತಿ ಜೇನು ಸಾಕಾಣಿಕೆಯ ಕುರಿತು ನಾವು ಮೊದಲು ವೈಜ್ಞಾನಿಕವಾಗಿ ಮಾಹಿತಿ ಮತ್ತು ತರಬೇತಿ ಪಡೆದು ಜೇನು ಕೃಷಿಯನ್ನು ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ಜೇನು ಕೃಷಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿದೆ ಎಂದರು.

    ಮೊದಲಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಸಹ ಒಂದೆರಡು ಜೇನು ಪೆಟ್ಟಿಗಳನ್ನು ಇರುತ್ತಿತ್ತು ಕಾಲ ಕ್ರಮೇಣ ಜೇನುಗಳು ಪೆಟ್ಟಿಗೆಯನ್ನು ಬಿಟ್ಟು ಹೋಗಲು ಪ್ರಾರಂಭಿಸಿದವು ನಮಗೆ ಜೇನುಗಳ ಬಗೆಗಿನ ಮಾಹಿತಿ ಮತ್ತು ಸೂಕ್ತ ತರಬೇತಿಯ ಕೊರತೆಯ ಕಾರಣ ಜೇನು ಸಾಕಾಣಿಕೆ ಕಾಲಕಲಕ್ಕೆ ಕುಂಠಿತವಾಯಿತು ಅದಕ್ಕಾಗಿ ನಮಗೆ ಜೇನು ಸಾಕಾಣಿಕೆಯ ಕುರಿತು ವೈಜ್ಞಾನಿಕ ತರಬೇತಿ ಅತ್ಯಾವಶ್ಯಕವಾಗಿದೆ ಎಂದರು.

    ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಜೇನು ಸಾಕಾಣಿಕೆಯ ತರಬೇತಿ ಕುರಿತಂತಹ ವಿಷಯ ನಮ್ಮ ಮುಂದೆ ಬಂದಾಗ ನಾವುಗಳು ಪರಸ್ಪರ ಚರ್ಚಿಸಿ ಉತ್ತರ ಕನ್ನಡ ಜಿಲ್ಲೆಯು ಜೇನು ಕೃಷಿಗೆ ಸೂಕ್ತ ವಾತಾವರಣ ಹೊಂದಿದ್ದು ಇದರಿಂದ ನಮ್ಮ ಅಡಿಕೆ, ತೆಂಗು ಹಾಗೂ ಇತರ ಬೆಳೆಗಳ ಪರಾಗಸ್ಪರ್ಶದ ಹಿತದೃಷ್ಠಿಯಿಂದ ಜೇನು ಕೃಷಿಯ ಈ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು ಎಂದು ಮಾಹಿತಿ ನೀಡಿದರು.

    ಪ್ರಾರಂಭದ ಹಂತದಲ್ಲಿ ಎಲ್ಲರೂ ಒಂದು ಅಥವಾ ಎರಡು ಜೇನು ಪೆಟ್ಟಿಗೆಗಳೊಂದಿಗೆ ಜೇನು ಸಾಕಾಣಿಕೆಯನ್ನು ಆರಂಭಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿ ತರಬೇತಿಯನ್ನು ಪಡೆದು ದೊಡ್ಡ ಪ್ರಮಾಣದಲ್ಲಿ ಜೇನು ಕೃಷಿಯನ್ನು ನಡೆಸಿಕೊಂಡು ಹೋಗಲು ಈ ವೈಜ್ಞಾನಿಕ ತರಬೇತಿ ಸಹಾಯವಾಗಲಿದ್ದು, ನಾವು ಈಗಿನ ಹಾಲು ಸಂಘಗಳಿಂದ ಹಾಲನ್ನು ಸಂಗ್ರಹಿಸಿ ರೈತರಿಗೆ ದರವನ್ನು ನೀಡುತ್ತಿದ್ದೇವೆಯೋ ಅದೇ ಮಾದರಲ್ಲಿ ಜೇನು ತುಪ್ವನ್ನು ರೈತರಿಂದ ಸಂಗ್ರಹಿಸಿ ಅಂದಿನ ಮಾರುಕಟ್ಟೆ ದರವನ್ನು ರೈತರಿಗೆ ನೀಡುವ ವ್ಯವಸ್ಥೆ ಶೀಘ್ರದಲ್ಲಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

    ಒಟ್ಟೂ ನೂರು ಜನರಿಗೆ ತರಬೇತಿಯನ್ನು ನೀಡಲು ನಾವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 25 ಜನರಂತೆ ಒಟ್ಟೂ 4 ಹಂತಗಳಲ್ಲಿ ತರಬೇತಿ ನಡೆಸಲಾಗುವುದು ಕೇವಲ ಭೋದನೆಯ ಮೂಲಕ ತರಬೇತಿ ನೀಡದೇ ಜಿಲ್ಲೆಯಲ್ಲಿ ಜೇನು ಕೃಷಿ ಮಾಡುತ್ತಿರುವ ರೈತರ ಮನೆಗಳಿಗೆ ಶಿಬಿರಾರ್ಥಿಗಳನ್ನು ಕರೆದೊಯ್ಯುವ ಮೂಲಕ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು ಎಂದರು.

    ಕಾರ್ಯಕ್ರಮದ ಪ್ರಾಸ್ತಾವಿಕ ನುಡಿನಿಗಳನ್ನಾಡಿದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿರಸಿಯ ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಶಿವಾನಂದ ಹೊಂಗಲ್ ಅವರು ಜೇನು ಕೃಷಿಯು ರೈತರಿಗೆ ಪೂರಕವಾದ ಆದಾಯ ದೊರಕಿಸಿಕೊಡುವಂತಹ ಲಾಭದಾಯಕ ಕೃಷಿ ಆಗಿದ್ದು, ಇದನ್ನು ಯಾವುದೇ ವರ್ಗದ ಜನರು ಮಾಡಬಹುದಾಗಿದ್ದು, ಕಾರ್ಮಿಕರು, ಮಹಿಳೆಯರು, ಕೃಷಿಕರು, ಸಣ್ಣ ಹಿಡುವಳಿದಾರರು ಮತ್ತು ಅಂಗವಿಲಕರೂ ಸಹ ಜೇನು ಕೃಷಿಯನ್ನು ಕೈಗೊಳ್ಳಬಹುದಾಗಿದ್ದು, ಇದನ್ನು ನಿರ್ವಹಿಸಲು ಹೆಚ್ಚಿನ ಬಂಡವಾಳದ ಅವಶ್ಯಕತೆ ಇರುವುದಿಲ್ಲ ಕಡಿಮೆ ಬಂಡವಾಳದ ಮೂಲಕ ನಾವು ಜೇನು ಕೃಷಿ ಚಟುವಟಿಕೆಯನ್ನು ಮಾಡಬಹುದಾಗಿದೆ ಎಂದರು.

    300x250 AD

    ಜೇನು ಕೃಷಿಯ ಕುರಿತು ವಿವರಿಸದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿರಸಿಯ ಪ್ರಭಾರ ಮುಖ್ಯಸ್ಥ ಡಾ. ನಾಗೇಶ ನಾಯ್ಕ ಅವರು ನಮ್ಮ ಜಿಲ್ಲೆಗೆ ಜೇನು ಕೃಷಿಯಂತಹ ಒಂದು ಉತ್ತಮ ಯೋಜನೆಯು ಕಾರ್ಯರೂಪಕ್ಕೆ ಬರಲು ಅತ್ಯಂತ ಕ್ರೀಯಾಶೀಲರಾದ ಸುರೇಶ್ಚಂದ್ರ ಹೆಗಡೆಯವರಿಂದ ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

    ನಮ್ಮ ಈ ಜಿಲ್ಲೆಯು ವಿವಿಧ ಜೀವ ವೈವೀಧ್ಯತೆಯಿಂದ ಕೂಡಿದ ಪ್ರದೇಶವಾಗಿದ್ದು, ಸಕಲ ಸಸ್ಯ ಮತ್ತು ಜೀವ ಸಂಕುಲಗಳನ್ನು ಒಳಗೊಂಡಿದೆ, ತೋಟಗಾರಿಕೆ, ಹೈನುಗಾರಿಕೆಯ ಜೊತೆಗೆ ಜೇನು ಕೃಷಿಯನ್ನು ನಿರ್ವಹಿಸಲು ಸಹ ನಾವು ವೈಜ್ಞಾನಿಕವಾಗಿ ತರಬೇತಿಯನ್ನು ಪಡೆದು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸದೃಢರಾಗಲು ರೈತರು ಜೇನು ಕೃಷಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ಈ ಮೂಲಕ ಅವರು ಕರೆ ನೀಡಿದರು.

    ಧಾರವಾಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಪರಶುರಾಮ ವಿ ನಾಯ್ಕ ಮಾತನಾಡಿ ಹಾಲು ಜೇನು ಒಂದಾದ ಹಾಗೇ ಎಂಬಂತೆ ನಮ್ಮ ಜಿಲ್ಲೆಯ ಹೈನೋದ್ಯದೊಂದಿಗೆ ಜೇನು ಕೃಷಿಯ ಕುರಿತಂತೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲೂ ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಈ ಸದಾವಕಾಶ ದೊರಕಿರುವುದು ಈ ಭಾಗದ ಹಾಲು ಉತ್ಪಾದಕ ರೈತರಿಗೆ ಮತ್ತು ಜಿಲ್ಲೆಯಲ್ಲಿ ಜೇನು ಕೃಷಿಯಲ್ಲಿ ಆಸಕ್ತರಿಗೆ ಬಹಳ ಅನುಕೂಲವಾಗಲಿದೆ ಎಂದರು.

    ನಂತರ ಮಾತನಾಡಿದ ಸಹಾಯಕ ಪ್ರಾಧ್ಯಾಪಕರು ಕೀಟಶಾಸ್ತ್ರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿರಸಿಯ ರಘುನಾಥ ಆರ್ ಅವರು ಸಕಲ ಜೀವ ಸಂಕುಲದ ಉಳಿವಿಗೆ ಜೇನು ಹುಳುಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಜೇನು ಕೃಷಿಯ ಮೂಲಕ ಪರಿಸರ ಮತ್ತು ಜೀವ ಸಂಕುಲದ ನಡುವಿನ ಸಮತೋಲವನ್ನು ನಾವು ಕಾಪಾಡಿಕೊಂಡು ಹೋಗಬಹುದಾಗಿದೆ ಎಂದರು.

    ಜೇನು ಕೃಷಿಯ ಮಹತ್ವದ ಕುರಿತಂತೆ ತರಬೇತಿಗೆ ಹಾಜರಾದ ಶಿಬಿರಾರ್ಥಿಗಳಿಗೆ ಜೇನು ಕೃಷಿಯ ಮಾಹಿತಿಯನ್ನು ಪರದೆಯ ಮೇಲೆ ಛಾಯಾಚಿತ್ರಗಳ ತುಣುಕುಗಳನ್ನು ಪ್ರದರ್ಶಿಸುವ ಮೂಲಕ ಮಾಹಿತಿ ಅತ್ಯಂತ ಮನೋಜ್ಞವಾಗಿ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಉತ್ರರ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯಸ್ಥರಾದ ಎಸ್‌.ಎಸ್.ಬಿಜೂರ್‌, ವಿಸ್ತರಣಾಧಿಕಾರಿಗಳಾದ ಪ್ರಕಾಶ ಕೆ, ದಯಾನಂದ ಎನ್‌, ಪಶು ವೈದ್ಯಾಧಿಕಾರಿಗಳಾದ ರಾಕೇಶ ತಲ್ಲೂರ್, ಶಿರಸಿ ಉಪ ವಿಭಾಗದ ಗುರುದರ್ಶನ ಭಟ್‌, ವಿಸ್ತರಣಾ ಸಮಾಲೋಚಕರುಗಳಾದ ದಯಾನಂದ ಎಂ ಬೋರ್ಕರ್‌, ಅಭಿಷೇಕ ನಾಯ್ಕ, ಜಯಂತ ಪಟಗಾರ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮದ ಪಾಲ್ಗೊಂಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರುಗಳು ಮುಖ್ಯ ಕಾರ್ಯನಿರ್ವಾಹಕರು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top