ಗೋಕರ್ಣ: ನೆಲಗುಣಿಯ ಮೊಡರ್ನ ಎಜ್ಯುಕೇಶನ್ ಟ್ರಸ್ಟ್ ನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ್ ಎಜ್ಯುಕೇಶನ್ ಸ್ಕೂಲ್ ನಲ್ಲಿ ಶನಿವಾರದಂದು ತಾಲೂಕಾ ಆರೋಗ್ಯ ಕೇಂದ್ರ ಕುಮಟಾ ಇವರ ವತಿಯಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜ್ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಕುಮಟಾ ಹಾಗೂ ಬಂಕಿಕೊಡ್ಲದ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ದಿನೇಶ ನಾಯ್ಕ, ಯುಸಫ್ ಸಾಮ್ರಾಣಿ, ಹಾಗೂ ಗೋಕರ್ಣದ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯರಾದ ಡಾ.ಜಗದೀಶ್ ನಾಯ್ಕ, ಸಿಬ್ಬಂದಿಗಳಾದ ಮಹಾಂತೇಶ ಹೂಗಾರ, ವಿದ್ಯಾ ನಾಯ್ಕ, ಶ್ಯಾಮಲಾ ನಾಯ್ಕ, ಶೈಲಜ ಬಂಡಾರಿ, ಆಶಾ ಕಾರ್ಯಕರ್ತೆ ಚಿತ್ರಾ ಗೌಡ ಕಾರ್ಯಕ್ರಮಕ್ಕೆ ಆಗಮಿಸಿದರು.
ಶಾಲಾ ವಿದ್ಯಾರ್ಥಿಗಳನ್ನು ಒಂದು ತಂಡದಲ್ಲಿ ಇಬ್ಬರಂತೆ ಒಟ್ಟೂ ಐದು ತಂಡಗಳನ್ನು ರಚಿಸಿ ಆ ತಂಡಕ್ಕೆ “ಥಟ್ ಅಂತಾ ಹೇಳಿ”, “ನಾನಾ ನೀನಾ”, ಮತ್ತು “ಮಾಡು ಇಲ್ಲವೇ ಮಡಿ” ಎಂಬ ಮೂರು ಸುತ್ತುಗಳ ಪ್ರಶ್ನೆಗಳನ್ನು ಕೇಳಲಾಯಿತು.
ಈ ಕಾರ್ಯಕ್ರಮದಲ್ಲಿ ವಿಜೇತರಾದ ಪ್ರಥಮ ತಂಡಕ್ಕೆ 750/- ರೂ, ದ್ವಿತೀಯ ತಂಡಕ್ಕೆ 500 ರೂ/- ಹಾಗೂ ತೃತೀಯ ತಂಡಕ್ಕೆ 250/- ರೂಗಳನ್ನು ನೀಡಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವೀಸ್, ಶಿಕ್ಷಕವೃಂದ, ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.