
ಹಳಿಯಾಳ: ಕರೋನಾ ಮೂರನೇ ಅಲೆಯ ನಿಯಂತ್ರಣದ ಮುನ್ನೆಚ್ಚರಿಕೆ ಭಾಗವಾಗಿ ತಾಲೂಕಿನ ವಿವಿಧೆಡೆ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ತಪಾಸಣಾ ಶಿಬಿರದ ಆಯೋಜನೆಯು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಡೆಯುತ್ತಿದ್ದು ಸಾಂಬ್ರಾಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು. ಶಿಬಿರದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ರೋಗ ನಿರೋಧಕ ಔಷಧಗಳು ಹಾಗೂ ಪೌಷ್ಠಿಕ ವರ್ಧಕ ಕಿಟ್ ಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬಿಸಿಯೂಟ ಸಿಬ್ಬಂದಿಗಳಿಗೆ ರೇಶನ್ ಕಿಟ್ ಮತ್ತು ಆಸ್ಪತ್ರೆಯ ಕೋರೋನಾ ಯೋಧರಿಗೆ ಕಂಫರ್ಟ ಕಿಟ್ ವಿತರಿಸಲಾಯಿತು.