ಮುರುಡೇಶ್ವರ: ಅತಿ ವೇಗವಾಗಿ ಬಂದ ಕಾರು ಸ್ಕೂಟಿ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರರಿಗೆ ಗಾಯಗಳಾಗಿರುವ ಘಟನೆ ಗುಮ್ಮನಹಕ್ಲ ಕ್ರಾಸ್ ಬಳಿ ನಡೆದಿದೆ.
ಸ್ಕೂಟಿಯಲ್ಲಿ ಮುರ್ಡೇಶ್ವರದಿಂದ ಭಟ್ಕಳದ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ಹೋಗುತ್ತಿರುವಾಗ ಹೊನ್ನಾವರ ಕಡೆಯಿಂದ ಭಟ್ಕಳದ ಕಡೆಗೆ ಹೋಗುತ್ತಿದ್ದ ಕಾರ್ ಚಾಲಕ ಅತಿವೇಗವಾಗಿ ಬಂದು ಅಜಾಗರೂಕತೆಯಿಂದ ಸ್ಕೂಟಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನಿಗೆ ಸೊಂಟ ಪೆಟ್ಟಾಗಿದ್ದು,ಹಿಂಬದಿ ಸವಾರರಿಗೂ ತಲೆಯ ಹಿಂಬದಿಗೆ ರಕ್ತ, ಗಾಯಗಳಾಗಿರುವ ಘಟನೆ ನಡೆದಿದೆ.
ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.