ಶಿರಸಿ: ಶಿಕ್ಷಣ ತಜ್ಞ, ಪ್ರಖ್ಯಾತ ಸಾಹಿತಿ ಪ್ರೊ.ಬಿ.ಎಚ್.ಶ್ರೀಧರರ ಹೆಸರಿನಲ್ಲಿ ಸ್ಥಾಪಿತವಾಗಿರುವ ಬಿ.ಎಚ್.ಶ್ರೀಧರ ಶಿಕ್ಷಣ ಪ್ರಶಸ್ತಿಗೆ ಈ ಬಾರಿ ಸಿದ್ದಾಪುರದ ಎಂ.ಜಿ.ಸಿ.ಕಲಾ ಮತ್ತು ವಿಜ್ಞಾನ ಕಾಲೇಜಿನ ವಿಧ್ಯಾರ್ಥಿನಿ, ಮೀನಾಕ್ಷಿ ಈಶ್ವರ ನಾಯ್ಕ ಆಯ್ಕೆಯಾಗಿದ್ದಾರೆ.
ಮೀನಾಕ್ಷಿಯು ಈಶ್ವರ ನಾಯ್ಕ ಹಾಗೂ ಕಮಲ ದಂಪತಿಗಳ ಪುತ್ರಿಯಾಗಿದ್ದಾಳೆ.
ಈ ಪ್ರಶಸ್ತಿಯು 2000 ರೂ ಹಾಗೂ ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಬಿ.ಎಚ್.ಶ್ರೀಧರರು ಸಿದ್ದಾಪುರದ ಎಂ.ಜಿ.ಸಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಥಮ ಪ್ರಾಚಾರ್ಯರಾಗಿ 1969ರಿಂದ 1976ರ ವರೆಗೆ ಕಾರ್ಯನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಬಿ.ಎ.ಅಂತಿಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಬಿ.ಎಚ್.ಶ್ರೀಧರ ಶಿಕ್ಷಣ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ.