ಕಾರವಾರ: ಕೋಮಾರಪಂತ ಸಮಾಜದ ಕೇಂದ್ರ ಕಮಿಟಿ ವತಿಯಿಂದ ಕೋಮಾರಪಂತ ಸಭಾಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಮಾಜದ ಮೂವರು ಅತ್ಯುತ್ತಮ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಡಲಸಿರಿ ಸಂಘಟನೆಯ ಮೂಲಕ ಅನೇಕ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ರಾಜ್ಯ ಮಟ್ಟದ ಏಕಪಾತ್ರ ಅಭಿನಯದಲ್ಲಿ ಪ್ರಥಮ ಸ್ಥಾನ ಪಡೆದು ಪಾಂಡಿಚೇರಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಯುವಜನೋತ್ಸವದಲ್ಲಿ ಪ್ರಭಲ ಸ್ಪರ್ಧಿಯಾಗಿ ಅರ್ಹತೆ ಪಡೆದಿರುವ ಹಾಗೂ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪಡೆದಿರುವ ಅಭಿಷೇಕ ಕಳಸ, ನಾಟ್ಯ ರಂಗಭೂಮಿ ಕಲೆಯಲ್ಲಿ ಸುಮಾರು 20 ವರ್ಷಗಳ ಕಾಲ ತಮ್ಮ ಅಭಿನಯದ ಮೂಲಕ ಜಿಲ್ಲೆಯಾದ್ಯಂತ ಪರಿಚಯರಾಗಿರುವ, ಸುಮಾರು 265 ಕ್ಕೂ ಅಧಿಕ ಸಾಮಾಜಿಕ ನಾಟಕ, ಯಕ್ಷಗಾನದಲ್ಲಿ ಅಭಿನಯಿಸಿರುವ ಕಲಾವಿದ, ಜಿಲ್ಲೆಯ ನೆಹರು ಯುವ ಕೇಂದ್ರದ ಜಿಲ್ಲಾಯುವ ಪ್ರಶಸ್ತಿ ವಿಜೇತ ನಾಗೇಂದ್ರ ಉಮೇಶ ಅಂಚೇಕರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈಯುತ್ತಿರುವ ಪಿ.ಯು.ಸಿ ದ್ವಿತೀಯ ವಿಜ್ಞಾನ ವಿಭಾಗದಲ್ಲಿ ಶೇ.96 ಅಂಕ ಪಡೆದಿರುವ ಪ್ರತಿಭಾನ್ವಿತ, ಯುವ ಜನೋತ್ಸವದಲ್ಲಿ ರಾಜ್ಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ತಮ್ಮ ಆಂಗ್ಲ ಬಾಷೆಯಲ್ಲಿ ಸಾಹಿತ್ಯ ಬರಿತವಾದ ಮಾತುಗಳಿಂದ ಆಶು ಭಾಷಣದಲ್ಲಿ ಪ್ರಥಮರಾಗಿ ಪಾಂಡಿಚೇರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯುವ ಜನೋತ್ಸವದಲ್ಲಿ ಆಯ್ಕೆಯಾದ ಪ್ರಸಾದ ಕಳಸ ಅವರಿಗೆ ಸಮಾಜದ ವತಿಯಿಂದ ಸನ್ಮಾನಿಸಿ, ಶುಭ ಹಾರೈಸಲಾಯಿತು.
ಅಂಕೋಲಾದ ಸಮಾಜ ಸೇವಕ ವಿಜಯಕುಮಾರ ನಾಯ್ಕ ಸಾಧಕರನ್ನು ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಮಹೇಶ ಪುರ್ಸು ನಾಯ್ಕ, ಮುಖ್ಯ ಅತಿಥಿಯಾಗಿ ಎಸ್.ಸಿ.ಎಸ್ ಸಮಿತಿ ಆಫ್ ನಸಿರ್ಂಗ್‍ನ ಪ್ರಮುಖ ಹಾಗೂ ಉದ್ಯಮಿ ಸುರೇಂದ್ರ ವಿಠೋಬಾ ನಾಯ್ಕ, ಕೇಂದ್ರ ಕಮಿಟಿಯ ಅಧ್ಯಕ್ಷ ಮಾರುತಿ ನಾಯ್ಕ, ಶಿಕ್ಷಣ ಸಮಿತಿಯ ಅಧ್ಯಕ್ಷ ದೇವಿದಾಸ ನಾಯ್ಕ ಸೇರಿದಂತೆ ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು.