ಶಿರಸಿ: ಖಗೋಳ ವೀಕ್ಷಣೆ ಮಾಡುವದರಿಂದ ನಮ್ಮಲ್ಲಿ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಕಾಶ ವೀಕ್ಷಣೆ ನಮ್ಮಲ್ಲಿ ವಿಶ್ಲೇಷಣಾ ಮನೋಭಾವವನ್ನು ಹುಟ್ಟು ಹಾಕುತ್ತದೆ. ಅತ್ಯಂತ ಸೂಕ್ಷ್ಮವಾಗಿ ಖಗೋಳವನ್ನು ಗಮನಿಸುವ ಕಾರಣದಿಂದಾಗಿ ಒಂದು ಮನೋಭಾವ ರೂಢಿಗೊಳ್ಳುವದರ ಜೊತೆಗೆ ತಾಳ್ಮೆ ,ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕ ಎಂದು “ಆಗಸ360” ಇದರ ಸಂಸ್ಥಾಪಕರು ಮತ್ತು ಬೈರುಂಭೆ ಶಾರದಾಂಬಾ ಹೈಸ್ಕೂಲ್ ಇಂಗ್ಲಿಷ್ ಮೀಡಿಯಂ ವಿಭಾಗದ ಮುಖ್ಯಾಧ್ಯಾಪಕ ವಸಂತ ಹೆಗಡೆ ಹೇಳಿದರು.
ಅವರು ಯೂತ್ ಫಾರ್ ಸೇವಾ ಅವರು ಶಿರಸಿಯ ಪ್ರೊಗ್ರೆಸ್ಸಿವ್ ಹೈಸ್ಕೂಲ್ ಮೈದಾನದಲ್ಲಿ ಸರ್ಕಾರಿ ಪ್ರೌಢಶಾಲೆ ನಿಲೇಕಣೀ, ಹಿರಿಯ ಪ್ರಾಥಮಿಕ ಶಾಲೆ ಗಾಂಧೀನಗರ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಖಗೋಳ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ಪರಂಪರೆಯಲ್ಲಿ ಆಕಾಶಕಾಯಗಳ ಅಧ್ಯಯನಕ್ಕೆ ವಿಶೇಷ ಸ್ಥಾನ ನೀಡಲಾಗಿದೆ.ನಮ್ಮ ಸಂಸ್ಕೃತಿಯೊಂದಿಗೆ ನಮ್ಮನ್ನು ಗುರುತಿಸಿಕೊಳ್ಳಲು ಇದು ಒಂದು ಉತ್ತಮ ಮಾರ್ಗವಾಗಿದೆ.ಆಕಾಶ ವೀಕ್ಷಣೆ ಜೀವನದಲ್ಲಿ ಒಂದು ಸ್ಮರಣೀಯ ಕ್ಷಣ ಎಂದರು.
ಹನ್ಮಂತಿಯ ವಿಭವ ಮಂಗಳೂರು ಖಗೋಳ ವೀಕ್ಷಣೆಯ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಕ್ಕಳಿಗೆ ವಿಶೇಷ ಮಾಹಿತಿ ನೀಡಿದರು.
ಯೂತ್ ಫಾರ್ ಸೇವಾ ಸಂಯೋಜಕ ಉಮಾಪತಿ ಭಟ್ಟ್ ಕೆವಿ, ನೀಲೆಕಣಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಮಹಾದೇವ ಎಸ್ ಎಚ್, ಲಕ್ಷ್ಮೀ ಮಡಗಾಂವಕರ, ಗಣೇಶ ನಾಯ್ಕ, ವಿನಾಯಕ ಪಟಗಾರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ವಸತಿ ನಿಲಯದ ವಾರ್ಡನ್ ನೇತ್ರಾವತಿ ಹರಿಕಂತ್ರ ಹಾಗೂ ಸಿಬ್ಬಂದಿಗಳು ಯೂತ್ ಫಾರ್ ಸೇವಾ ವಾಲಂಟಿಯರ್ ಶ್ರೀಧರ ಹೆಗಡೆ , ಸ್ಪೂರ್ತಿ ಗಂಗೊಳ್ಳಿ, ಸೂರಜ್ ಗಂಗೊಳ್ಳಿ, ಮಹಾಲಕ್ಷ್ಮೀ ಭಟ್ಟ ಕೆವಿ ಉಪಸ್ಥಿತರಿದ್ದರು.
ಆಕಾಶ ವೀಕ್ಷಣೆಯಲ್ಲಿ110 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯೂತ್ ಫಾರ್ ಸೇವಾ ಸ್ವಯಂಸೇವಕಿ ಕೀರ್ತಿ ನಾಯ್ಕ ಪ್ರಾರ್ಥಿಸಿದರು. ಧನ್ಯಾ ಉಗ್ರಾಣಕರ ಸ್ವಾಗತಿಸಿದರು.ನಂದೀಶ್ ವಿ ನಿರೂಪಿಸಿದರು. ಎನ್.ಬಿ. ನಾಯ್ಕ ವಂದಿಸಿದರು.