• first
    second
    third
    previous arrow
    next arrow
  • ಬಿಸಲಕೊಪ್ಪ ಶಾಲೆಯಲ್ಲಿ ಕೈಗಾ ಕೇಂದ್ರದಿಂದ ಜಾಗೃತಿ ಕಾರ್ಯಕ್ರಮ

    300x250 AD

    ಶಿರಸಿ: ಸೂರ್ಯನಾರಾಯಣ ಪ್ರೌಢ ಶಾಲೆ ಬಿಸಲಕೊಪ್ಪದಲ್ಲಿ ಫೆ.16 ರಂದು ಎನ್. ಪಿ.  ಸಿ  ಐ. ಎಲ್ ಕೈಗಾ ದಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.

    ಕೈಗಾ ಕೇಂದ್ರದ ಅಧಿಕಾರಿಗಳಾದ ಎಂ.ಎನ್. ಹೆಗಡೆ, ಶ್ರೀನಿವಾಸ ಪಂಚಮುಖಿ ಹಾಗೂ ಶಾಜಿ ಥಾಮಸ್ ರವರು ಭೇಟಿ ನೀಡಿ ಮಕ್ಕಳಿಗೆ ಮಾಹಿತಿ ನೀಡಿದರು.

    ಕೈಗಾ ಅಧಿಕಾರಿ ಶ್ರೀನಿವಾಸ ಪಂಚಮುಖಿ ಕೈಗಾದಲ್ಲಿ ಯಾವ ರೀತಿ ವಿದ್ಯುತ್ ಉತ್ಪಾದನೆ ಆಗುತ್ತಿದೆ ಹಾಗೂ ಸುರಕ್ಷತೆ ಕ್ರಮ ಯಾವ ರೀತಿ ಇದೆ ಎಂಬುದನ್ನು ಸಚಿತ್ರ ಸಹಿತ ವಿವರಿಸಿದರು.

    300x250 AD

    ನಂತರ ಕ್ವಿಜ್ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಬಹುಮಾನ ವಿತರಿಸಿದರು.

    ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್. ಎಂ. ಹೆಗಡೆ  ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಲೋಕನಾಥ್ ನಿರ್ವಹಿಸಿದರೆ ಶಿಕ್ಷಕ ಗಣೇಶ್ ಸಾಯಿಮನೆ ವಂದಿಸಿದರು.  

    Share This
    300x250 AD
    300x250 AD
    300x250 AD
    Back to top