• Slide
    Slide
    Slide
    previous arrow
    next arrow
  • ಪ್ರಾಚಾರ್ಯ ವಿನಾಯಕ ಹೆಗಡೆ’ಗೆ ರಾಷ್ಟ್ರೀಯ ದ್ರೋಣ ರತ್ನ ಪ್ರಶಸ್ತಿ

    300x250 AD

    ಅಂಕೋಲಾ: ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿನಾಯಕ ಜಿ ಹೆಗಡೆ ಅವರು ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯದಲ್ಲಿ ನೊಂದಣಿಯಾದ ಎಕ್ಸಲೆಂಟ ವರ್ಡ ರೆಕಾರ್ಡ ಕೊಡಮಾಡಿದ ರಾಷ್ಟ್ರೀಯ ದ್ರೋಣ ರತ್ನ ಅವಾರ್ಡ 2022ಕ್ಕೆ ಭಾಜನರಾಗಿದ್ದಾರೆ.

    ಉತ್ತರಕಾಂಡದ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಕ್ಸಲೆಂಟ ವಲ್ರ್ಡ್ ರೆಕಾರ್ಡನ ಸ್ಥಾಪಕ ಹಾಗೂ ನಿರ್ದೇಶಕ ವಿನೋದ ಕುಮಾರ ವರ್ಮಾ, ನಿರ್ದೇಶಕ ಸುರೇಶ ಕಾರಂಜಿ, ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅಂಜು ಭಂಡಾರಿ, ಕುಲಸಚಿವರಾದ ಡಾ.ಕಪಿಲ್ ದೇವ ಆರ್ಯ ಭಾರತ ಕರಾಠೆ ಅಸೋಶಿಯೇಶನ್ ಕಾರ್ಯದರ್ಶಿ ಶಿಹಾನ ಚೌದರಿ ಸ್ಥಾಪಕ ಅಧ್ಯಕ್ಷ ಸತೀಶ ಚೌದರಿಯರು ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 28 ರಾಜ್ಯಗಳ ಪ್ರತಿನಿಧಿಗಳಲ್ಲಿ ಕರ್ನಾಟಕದಿಂದ ವಿನಾಯಕ ಜಿ. ಹೆಗಡೆ, ಮೋಹನ ಸಿಂಘ ರಜಪೂತ, ಸಂಗಮೇಶ ಹಚಡದ, ಸುಶೀಲಕುಮಾರ ವಿವೇಕ ಹೆಗಡೆ, ಕುಮಾರಿ ಹರುಶಾ ಸೇರಿದಂತೆ ಐದು ಜನ ವಿವಿಧ ವಿಭಾಗಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    300x250 AD

    ಪ್ರಶಸ್ತಿ ಪಡೆದ ಡಾ. ವಿನಾಯಕ ಜಿ. ಹೆಗಡೆಯವರನ್ನು ಕೆ.ಎಲ್.ಇ. ಸಂಸ್ಥೆಯ ಕಾರ್ಯದ್ಯಕ್ಷರಾದ ಡಾ. ಪ್ರಭಾಕರ ಕೋರೆ, ಬಿ.ಇಡಿ. ವಿಭಾಗದ ಅದ್ಯಕ್ಷರಾದ ಜಯಾನಂದ ಮುನವಳ್ಳಿ ಸದಸ್ಯ ಕಾರ್ಯದರ್ಶಿಗಳಾದ ಮಹಾದೇವ ಬಳಿಗಾರ, ಸ್ಥಳೀಯ ಕಾರ್ಯದರ್ಶಿಗಳಾದ ಡಾ. ಡಿ.ಎಲ್.ಭಟ್ಕಳ, ಸಯೋಜಕರಾದ ಆರ್. ನಟರಾಜ, ಸದಸ್ಯರಾದ ಡಾ.ಮೀನಲ್ ನಾರ್ವೇಕರ ಸಮಸ್ತ ಭೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top