• Slide
  Slide
  Slide
  previous arrow
  next arrow
 • ಫಾಸ್ಟಫುಡ್ ರುಚಿಗೆ ಜನ ಮರುಳು;ಹೊಟೇಲ ಉದ್ಯಮದ ಮೇಲೆ ಕರಿನೆರಳು

  300x250 AD

  ಅಂಕೋಲಾ : ನೆರೆಯ ಚೈನಾ ದೇಶದ ಫಾಸ್ಟಫುಡ್ ಸಂಸ್ಕ್ರತಿ ಇದೀಗ ಗಲ್ಲಿ ಗಲ್ಲಿಯಲ್ಲಿ ಕಂಡು ಬರುತ್ತಿದೆ. ಇದರ ರುಚಿಗೆ ಜನ ಮರುಳಾಗುತ್ತಿದ್ದು ದೇಶೀಯ ಹೊಟೇಲ ಉದ್ಯಮದ ಮೇಲೆ ಕರಿನೆರಳಿನ ಛಾಯೆ ಮೂಡುತ್ತಿದೆ. ಸಂಜೆಯಾದರೆ ಸಾಕು ಫಾಸ್ಟಫುಡ್ ಅಂಗಡಿಗಳ ಮುಂದೆ ಜನವೋ ಜನ ಕೆಲವೊಮ್ಮೆಯಂತೂ ಪಾರ್ಸಲ್ ಕೂಡ ಸಿಗುವದಿಲ್ಲ. ಸಂಜೆಯ ಸಮಯದಲ್ಲಿ ಪಾನಿ ಪುರಿ, ಭೇಲಪುರಿ ಮುಂತಾದ ಚಾಟ್ ಸೆಂಟರಗಳಿಗೆ ಜನ ಮುಗಿಬಿದ್ದರೆ ಕತ್ತಲಾದಂತೆ ಮಾಂಸಾಹಾರಿ ಫಾಸ್ಟಫುಡ್ ಸೆಂಟರಗಳಿಗೆ ಜನ ಮುಗಿಬೀಳುತ್ತಾರೆ. ಶಾಲಾ ಮಕ್ಕಳಂತೂ ಹೊಟೇಲ ತಿಂಡಿಗಿಂತ ಇಂತಹ ರಸ್ತೆಬದಿಯ ತಿಂಡಿಗಳಿಗೇ ಮಾರುಹೋಗುತ್ತಿದ್ದಾರೆ. ಅದೇನು ಮರುಳೋ ಗೊತ್ತಿಲ್ಲ ತಿನ್ನದಿದ್ದರೆ ಊಟ ಮಾಡಿದಂತೆಯೇ ಆಗುವದಿಲ್ಲ ಎನ್ನುವವರಿದ್ದಾರೆ.

  ಈ ಚಾಟ್ ಸೆಂಟರ್ ಮತ್ತು ಫಾಸ್ಟಫುಡ್ ಹಾವಳಿಯಿಂದಾಗಿ ಹೊಟೇಲುಗಳಲ್ಲಿ ಗಿರಾಕಿಗಳು ಇಲ್ಲದೆ ಮಾಡಿದ ತಿಂಡಿಗಳೆಲ್ಲ ಖರ್ಚಾಗದೇ ಉಳಿಯುತ್ತಿವೆ. ಸಂಜೆಯಾದಂತೆ ಹೊಟೇಲುಗಳು ಗಿರಾಕಿಗಳಿಲ್ಲದೆ ಭಣಗುಡುತ್ತಿವೆ.

  ನಿಯಮ ಗಾಳಿಗೆ ತೂರಲಾಗುತ್ತಿದೆ.
  ನಿಯಮದ ಪ್ರಕಾರ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಕ್ಲೀನ್ ಫುಡ್ ಸ್ಟ್ರೀಟ್ ಯೋಜನೆಯನ್ವಯ ನಿರ್ದಿಷ್ಠ ಸ್ಥಳವನ್ನೇ ನಿಗದಿಪಡಿಸಬೇಕು. ಅಲ್ಲಿ ತೆರೆದ ಚರಂಡಿ, ವಾಹನಗಳ ಓಡಾಟ, ಧೂಳು ಇತ್ಯಾದಿಗಳು ಇರುವಂತಿಲ್ಲ.
  ಆದರೆ ಅಂಕೋಲಾ ಪಟ್ಟಣದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಇಂತಹ ಫಾಸ್ಟಫುಡ್ ಅಂಗಡಿಗಳಿಗೆ/ವಾಹನಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಎಲ್ಲೆಂದರಲ್ಲಿ ಮುಖ್ಯ ರಸ್ತೆಯಲ್ಲೇ ಫಾಸ್ಟಫುಡ್ ಅಂಗಡಿಗಳು ಪ್ರತ್ಯಕ್ಷವಾಗುತ್ತವೆ. ಆಹಾರ ಪದಾರ್ಥಗಳನ್ನು ತೆರೆದಿಟ್ಟುಕೊಂಡೇ ಮಾರಲಾಗುತ್ತಿದೆ. ಕೆಲವರಂತೂ ರಸ್ತೆಯಲ್ಲೆ ಆಸನ ವ್ಯವಸ್ಥೆಗಳನ್ನೂ ಮಾಡುತ್ತಾರೆ.

  ರಸ್ತೆ ಬದಿಯ ಚಾಟ್ ಮತ್ತು ಫಾಸ್ಟಫುಡ್ ಸೆಂಟರಗಳಲ್ಲಿ ಮಾಡುವ ತಿಂಡಿ ನಾಲಿಗೆಗೆ ಮಾತ್ರ ರುಚಿ. ರುಚಿಯನ್ನು ಹೆಚ್ಚಿಸಲು ಯಾವೆಲ್ಲ ರಾಸಾಯನಿಕಗಳು ಬೇಕೋ ಅವನ್ನೆಲ್ಲ ಬಳಸುತ್ತಾರೆ. ಸ್ವಚ್ಚತೆಯನ್ನು ಕೇಳಲೇಬೇಡಿ. ಒಂದೆರಡು ಬಿಂದಿಗೆ ನೀರಲ್ಲಿ ಎಲ್ಲವನ್ನೂ ನಿಭಾಯಿಸ್ತಾರೆ. ಬಳಸಿದ ಪದಾರ್ಥಗಳನ್ನೇ ಮತ್ತೆ ಮತ್ತೆ ಬಳಸುತ್ತಾರೆ. ರಸ್ತೆಯ ಮೇಲೆಯೇ ಅಂಗಡಿ ನಿಲ್ಲಿಸಿ ಮಾರಾಟ ಮಾಡುತ್ತಾರೆ
  ಇವನ್ನೆಲ್ಲ ಯಾರೂ ಪ್ರಶ್ನಿಸುವಂತಿಲ್ಲ ಯಾಕೆಂದರೆ ಅವರೂ ಕೂಡ ಅಧಿಕೃತವಾಗಿ ಲೈಸೆನ್ಸ್ ಪಡೆದು ಪುರಸಭೆಗೆ ಟ್ಯಾಕ್ಸ್ ಕಟ್ಟುತ್ತೇವೆ ಎನ್ನುತ್ತಾರೆ. ಆಹಾರ ಪದಾರ್ಥಗಳ ವ್ಯಾಪಾರಕ್ಕೆ ಅನುಮತಿ ನೀಡುವಾಗ ಕೆಲವು ನಿಬಂಧನೆಗಳನ್ನು ಪಾಲಿಸಲಾಗುತ್ತಿಲ್ಲ ಎನ್ನುವ ಆರೋಪವೂ ಇದೆ. ಅಲ್ಲದೆ ಅಂಕೋಲಾದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿಯಂತ್ರಿಸಲು ಅಧಿಕೃತವಾಗಿ ಯಾವುದೇ ಅಧಿಕಾರಿಯಿಲ್ಲದಿರುವದೂ ಕೂಡ ಇದಕ್ಕೆಲ್ಲ ಕಾರಣವಾಗಿದೆ.

  ಆರೋಗ್ಯಕ್ಕೆ ಹಾನಿಕಾರಕ
  ನಾಲಗೆಗೆ ರುಚಿಕರವಾಗಿ ಇರುವುದು ಯಾವತ್ತಿಗೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಫಾಸ್ಟ್ ಫುಡ್ ಗಳು ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ಹೇಳಲಾಗಿದೆ. ಕರಿದ ಹಾಗೂ ಇತರ ಕೆಲವೊಂದು ರುಚಿಕರ ಸಾಮಗ್ರಿ ಸೇರಿಸಿಕೊಂಡು ತಯಾರಿಸುವ ಫಾಸ್ಟ್ ಫುಡ್ ರುಚಿಕರ ಹಾಗೂ ಅಗ್ಗವಾಗಿಯೂ ಲಭ್ಯವಿರುವದರಿಂದ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಆದರೆ ಇದನ್ನು ತಯಾರಿಸುವ ವೇಳೆ ಯಾವ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಯಾರೂ ಯೋಚಿಸುವದಿಲ್ಲ. ರುಚಿಯನ್ನು ಹೆಚ್ಚಿಸಲು ತುಂಬಾ ಅಗ್ಗದ ಸಾಮಗ್ರಿಗಳನ್ನು ಬಳಕೆ ಮಾಡುವದಲ್ಲದೆ ಅಧಿಕ ಸೋಡಿಯಂ ಬಳಸುವರು. ನಿμÉೀಧಿತ ಅಜಿನಮೋಟೊವನ್ನೂ ಕೂಡ ಬಳಸಲಾಗುತ್ತದೆ. ರುಚಿಕರ ಹಾಗೂ ಸಂರಕ್ಷಕಗಳಿಂದಾಗಿ ಇದು ದೇಹಕ್ಕೆ ಒಳ್ಳೆಯದಲ್ಲ. ಇದನ್ನು ಅತಿಯಾಗಿ ಸೇವನೆ ಮಾಡಿದರೆ, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ.

  ಫಾಸ್ಟಫುಡ್ ಮತ್ತು ತಂಪು ಪಾನೀಯ ಇತ್ಯಾದಿಗಳಲ್ಲಿ ಅತಿಯಾಗಿ ಕಾರ್ಬೋಹೈಡ್ರೇಟ್ಸ್ ಇರುತ್ತದೆ ಮತ್ತು ಯಾವುದೇ ನಾರಿನಾಂಶ ಇರುವುದಿಲ್ಲ. ಇದು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ವಿಘಟನೆಯಾದ ವೇಳೆ ಅದು ಗ್ಲುಕೋಸ್ ಆಗಿ ರಕ್ತನಾಳಗಳಲ್ಲಿ ಬಿಡುಗಡೆ ಆಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದು.

  ಇದು ದೇಹದಲ್ಲಿ ಇನ್ಸುಲಿನ್ ಮೇಲೆ ಕೂಡ ಪರಿಣಾಮ ಬೀರುವುದು. ಹೀಗಾಗಿ ಟೈಪ್ 2 ಮಧುಮೇಹ ಮತ್ತು ತೂಕ ಹೆಚ್ಚಳವು ಆಗಬಹುದು ಎಂದು ವೈದ್ಯಕೀಯ ಮಾಹಿತಿ ಹೇಳುತ್ತದೆ.

  300x250 AD

  ರಾಸಾಯನಿಕ ಬಳಕೆ ಹೃದಯಕ್ಕೆ ತೊಂದರೆ.
  ಫಾಸ್ಟ್ ಫುಡ್ ಗಳಿಗೆ ಹೆಚ್ಚು ಸೋಡಿಯಂ ಬಳಕೆ ಮಾಡುವ ಪರಿಣಾಮವಾಗಿ ಅದು ರುಚಿಕರವಾಗಿ ಇರುತ್ತದೆ. ಆದರೆ ಅಧಿಕ ಸೋಡಿಯಂ ದೇಹದಲ್ಲಿ ದ್ರವಾಂಶ ಶೇಖರಣೆಗೆ ಕಾರಣವಾಗಬಹುದು. ಇದು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ತುಂಬಾ ಅಪಾಯಕಾರಿ. ಫಾಸ್ಟ್ ಫುಡ್ ಎನ್ನುವುದು ಹಠಾತ್ ಆಗಿ ಹಸಿವು ತಣಿಸುವುದಾದರೂ ಇದು ದೀರ್ಘಕಾಲಕ್ಕೆ ದೇಹಕ್ಕೆ ಹಾನಿ ಉಂಟು ಮಾಡಬಹುದು. ಫಾಸ್ಟ್ ಫುಡ್ ಮತ್ತು ಸಂಸ್ಕರಿಸಿದ ಆಹಾರ ಸೇವನೆ ಮಾಡುವ ಶೇ.51ರಷ್ಟು ಜನರು ಖಿನ್ನತೆಗೆ ಒಳಗಾಗುವರು ಎಂದು ಅಧ್ಯಯನಗಳು ಹೇಳಿವೆ. ಫಾಸ್ಟ್ ಫುಡ್ ನಲ್ಲಿ ಇರುವಂತಹ ಅಧಿಕ ಮಟ್ಟದ ಕ್ಯಾಲರಿಯು ತೂಕ ಹೆಚ್ಚಳಕ್ಕೆ ಕಾರಣವಾಗುವುದು ಮತ್ತು ಬೊಜ್ಜು ಹೆಚ್ಚಿಸುವುದು. ಇದರಿಂದ ಶ್ವಾಸಕೋಶದ ಸಮಸ್ಯೆಗಳಾಗಿರುವಂತಹ ಅಸ್ತಮಾ ಮತ್ತು ಉಸಿರಾಟದ ತೊಂದರೆಯು ಕಂಡುಬರುವುದು.

  ಫಾಸ್ಟ್ ಫುಡ್ ನಲ್ಲಿ ಯಾವಾಗಲೂ ಅಧಿಕ ಸಕ್ಕರೆಯು ಇರುವುದು ಮತ್ತು ಇದರಿಂದ ಕ್ಯಾಲರಿ ಸೇವನೆ ಹೆಚ್ಚಾಗುತ್ತದೆ. ಟ್ರಾನ್ಸ್ ಫ್ಯಾಟ್ ದೇಹದಲ್ಲಿ ಬೇಡದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ಮಧುಮೇಹ ಹಾಗೂ ಹೃದಯದ ಸಮಸ್ಯೆಗಳು ಬರುವುದು. ಮತ್ತು
  ಅತಿಯಾದ ಕಾಬ್ರ್ಸ್ ಮತ್ತು ಸಕ್ಕರೆ ಹೊಂದಿರುವಂತಹ ಫಾಸ್ಟ್ ಫುಡ್ ಸೇವನೆಯಿಂದ ಬಾಯಿಯಲ್ಲಿ ಆಮ್ಲೀಯತೆ ಹೆಚ್ಚಾಗಿ ದಂತಕುಳಿ ಸಮಸ್ಯೆಯು ಕಂಡುಬರುವುದು. ದಂತಕುಳಿಯ ಜತೆಗೆ ಬ್ಯಾಕ್ಟೀರಿಯಾವು ನಿರ್ಮಾಣವಾಗಿ ಒಸಡಿನ ಸಮಸ್ಯೆಗಳು ಕಂಡುಬರುವುದು.
  ಫಾಸ್ಟ್ ಫುಡ್ ಸಂತಾನೋತ್ಪತ್ತಿ ಮೇಲೆ ಕೂಡ ಪರಿಣಾಮ ಬೀರುವುದು. ಸಂಸ್ಕರಿತ ಆಹಾರದಲ್ಲಿ ಥಾಲೇಟ್ ಗಳು ಅಧಿಕವಾಗಿ ಇರುವುದು.
  ಇದು ದೇಹದಲ್ಲಿ ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರಬಹುದು. ಅಧಿಕ ಮಟ್ಟದಲ್ಲಿ ರಾಸಾಯನಿಕವು ಉತ್ಪತ್ತಿ ಆಗಿ ಅದು ಸಂತಾನೋತ್ಪತ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

  ರಸ್ತೆ ಬದಿಯ ಅಶುದ್ಧ ಹಾಗೂ ಕಲಬೆರಕೆ ತಿಂಡಿಗಳನ್ನು ತಿಂದು ಮಕ್ಕಳಲ್ಲಿ ವಾಂತಿ ಬೇಧಿ ಬರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ನಿಗಾ ವಹಿಸಲಾಗುವದು.
  -ಡಾ.ನಿತಿನ ಹೊಸ್ಮಲಕರ
  ತಾಲೂಕ ಆರೋಗ್ಯಾಧಿಕಾರಿ ಅಂಕೋಲಾ.

  ಆಹಾರ ಪದಾರ್ಥಗಳನ್ನು ಎಲ್ಲಿ ಬೇಕೆಂದರಲ್ಲಿ ಹೇಗೆಲ್ಲ ಮಾರುವಂತಿಲ್ಲ. ಮಾರಾಟಕ್ಕೆ ಅನುಮತಿ ನೀಡುವಾಗ ಷರತ್ತು ವಿಧಿಸಿ ಸ್ವಚ್ಚತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವದು ಅತೀ ಅವಶ್ಯ.
  ಅಂಕೋಲಾದಲ್ಲಿ ಆಹಾರ ಪದಾರ್ಥ ನಿಯಂತ್ರಣ ಅಧಿಕಾರಿಯನ್ನಾಗಿ ತಾಲೂಕ ಆರೋಗ್ಯಾಧಿಕಾರಿಯನ್ನು ನೇಮಿಸುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಸದ್ಯದಲ್ಲೇ ಈ ಕುರಿತು ಅಧಿಕೃತ ಆದೇಶ ಬರಬಹುದು. -ಡಾ.ರಾಜಶೇಖರ ಪಾಳೇದವರ (ಜಿಲ್ಲಾ ಅಂಕಿತ ಅಧಿಕಾರಿ,ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಕಾರವಾರ)

  ಹೊಟೇಲುಗಳಲ್ಲಿ ಆಸನ, ಫ್ಯಾನು, ಶುದ್ಧ ನೀರು, ಬಿಸಿ ನೀರು ಮುಂತಾದ ಮುಂತಾದ ಎಲ್ಲ ವ್ಯವಸ್ಥೆ ಇರುತ್ತದೆ ಅಲ್ಲದೆ ಸ್ಬಚ್ಚತೆಯ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತದೆ. ಆದರೂ ಅದೇಕೊ ಜನ ರಸ್ತೆ ಬದಿ ನಿಂತು ತಿನ್ನುವದರಲ್ಲೇ ಖುಷಿ ಪಡ್ತಾರೆ. ಹೀಗಾಗಿ ಹೊಟೇಲುಗಳಲ್ಲಿ ಗ್ರಾಹಕರು ಬಾರದೆ ಮಾಡುವ ತಿಂಡಿಗಳು ಖರ್ಚಾಗದೆ ಹಾಗೇ ಉಳಿದುಕೊಳ್ಳುತ್ತಿವೆ.
  -ದಿನಕರ ನಾಯ್ಕ( ಹೊಟೇಲ ಉದ್ಯಮಿ)

  Share This
  300x250 AD
  300x250 AD
  300x250 AD
  Leaderboard Ad
  Back to top