ಕಾರವಾರ; ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಶಿರ್ವೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಶಿಕ್ಷಣವನ್ನು ಪಡೆಯಲು ದಟ್ಟವಾದ ಕಾಡು ಇರುವ ಡಾಂಬರೀಕರಣ ರಸ್ತೆಯಿಂದ ಹೋಗಿ ಬರುವುದಕ್ಕೆ ಒಟ್ಟು 18 ಕಿ.ಮೀ ಕಾಲ್ನಡಿಗೆ ಮೂಲಕ ಶ್ರಮಿಸಬೇಕಾಗಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದರ ಮುಂಚೆ ನೀಡುತ್ತಿರುವ ಉಚಿತ ಬೈಸಿಕಲ್ ವಿತರಣೆಯನ್ನು ಸರಕಾರ ನಾನಾ ಕಾರಣಗಳಿಂದ ಸ್ಥಗಿತ ಮಾಡಲಾಗಿದೆ. ಇದರಿಂದ ಶಿರ್ವೆಯ ವಿದ್ಯಾರ್ಥಿಗಳಿಗೆ ಬೈಸಿಕಲ್ ಸೌಲಭ್ಯ ಇಲ್ಲದೆ ಈಗ ಕಾಲ್ನಡಿಗೆ ಮೂಲಕ ಬರುವುದು ಅನಿವಾರ್ಯವಾಗಿದೆ.
ಶಿರ್ವೆ ಗ್ರಾಮದಿಂದ ದೇವಳಮಕ್ಕಿಯ ಆದರ್ಶ ವಿದ್ಯಾಲಯದಲ್ಲಿ 18 ವಿದ್ಯಾರ್ಥಿಗಳು ಕೇರವಡಿಯ ದುರ್ಗಾದೇವಿ ಪದವಿಪೂರ್ವ ಕಾಲೇಜಿನಲ್ಲಿ 9 ವಿದ್ಯಾರ್ಥಿಗಳು, ಹಾಗೂ ಸಿದ್ದರ ಐಟಿಐದಲ್ಲಿ ಒಬ್ಬ ವಿದ್ಯಾರ್ಥಿ ವಾಸ್ಯಂಗ ಪಡೆಯುತ್ತಾ ಇದ್ದಾರೆ. ಅಷ್ಟು ಮಾತ್ರವಲ್ಲದೆ ಆ ಗ್ರಾಮಸ್ಥರು ಬೇರೆ ಕಡೆ ಕೂಲಿ ಕೆಲಸವನ್ನು ಮಾಡಬೇಕಾದರೆ ತಮ್ಮ ಗ್ರಾಮದಿಂದ ಬೇರೆ ಗ್ರಾಮದ ಕಡೆ ತಮ್ಮ ಗ್ರಾಮದಲ್ಲಿ ಯಾವುದೇ ಸಾರಿಗೆ ಸೌಕರ್ಯ ಇಲ್ಲದೆ ಕಾಲ್ನಡಿಗೆ ಮೂಲಕ ಹೋಗಿ ಬರುವುದಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಬೆಳ್ಳಿಗೆ 7 ಗಂಟೆಯಿಂದ ಕಾಲ್ನಡಿಗೆ ಮೂಲಕ ನಡೆದು ಸರಿಯಾಗಿ ಸಮಯಕ್ಕೆ ಶಾಲಾ ಕಾಲೇಜುಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ಅನಿವಾರ್ಯ ಬಿಟ್ಟಿದೆ ಒಟ್ಟಾಗಿ 6 ಘಂಟೆ ಕಾಲ್ನಡಿಗೆ ಮೂಲಕ ಹೋಗಿ ಬರಲು ಸಮಯ ಹೋಗುತ್ತದೆ. ಇದರಿಂದ ಶಿರ್ವೆ ಗ್ರಾಮದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾಬ್ಯಾಸ ಮಾಡಲು ಸಹ ಸಮಯಾವಕಾಶ ಸಿಗುವುದಿಲ್ಲ.
ದೇವಳಮಕ್ಕಿ ಗ್ರಾಮದಿಂದ ಶಿರ್ವೆ ಗ್ರಾಮದ ತನಕ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಅಡಿಯಲ್ಲಿ ಅಂದಾಜು 4 ಕೋಟಿ 35 ಲಕ್ಷ ರೂಪಾಯಿ ವೆಚ್ಚದ ಹೊಸದಾದ ಡಾಂಬರೀಕರಣ ರಸ್ತೆ ಸಂಪರ್ಕ ಇದ್ದರೂ ಸಹ ಇನ್ನೂ ತನಕ ಬಸ್ಸು ಸಂಚಾರ ಇಲ್ಲಾ ಅಂತ ಅಲ್ಲಿನ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಶಿಕ್ಷಣ ಇಲಾಖೆಯವರು ಕುಗ್ರಾಮದ ವಿದ್ಯಾರ್ಥಿಗಳು ಯಾವುದೇ ಕಾರಣ ಇಲ್ಲದೇ ಶಿಕ್ಷಣದಲ್ಲಿ ವಂಚಿತರಾಗಬಾರದು ಅಂತ ವಿವಿಧ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು ಯೋಜನೆಯನ್ನು ಜಾರಿಗೆ ತರುತ್ತಾರೆ. ಆದರೆ ಶಿರ್ವೆ ಗ್ರಾಮದ ವಿದ್ಯಾರ್ಥಿಗಳಿಗೆ ಯಾವುದೇ ಸರಿಯಾಗಿ ಸೌಲಭ್ಯ ಸಿಗುವುದಿಲ್ಲ ಅಂತ ಗ್ರಾಮಸರ ದೂರು. ದಿನಾಲೂ ಕಾಲ್ನಡಿಗೆ ಮೂಲಕ ಕಷ್ಟವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ನೋವುವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಪ್ರಜ್ವಲ್ ಬಾಬುರಾಯ ಶೇಟ್ (ಯುವ ಮುಖಂಡರು ದೇವಳಮಕ್ಕಿ):
ಶಿರ್ವೆ ಗ್ರಾಮದ ಯಾರೋಬ್ಬ ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಹಲವು ವರ್ಷಗಳಿಂದ ಅವರು ಕಾಲ್ನಡಿಗೆ ಮೂಲಕ ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಯಾವುದೇ ಕಷ್ಟವಾಗದಂತೆ ಸಂಬಂಧ ಪಟ್ಟ ಅಧಿಕಾರಿಗಳು ಸಾರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕೇಳಿಸಿಕೊಳ್ಳುತ್ತಿದ್ದೇನೆ.
ಭವಾನಿ ಸುಬ್ರಾಯ ಗೌಡ (ಪ್ರೌಢಶಾಲಾ ವಿದ್ಯಾರ್ಥಿನಿ ಶಿರ್ವೆ):
ನಾವು ದಿನಾಲೂ ನಮ್ಮ ಆದರ್ಶ ವಿದ್ಯಾಲಯಕ್ಕೆ ಹೋಗಿ ಬರುವುದಕ್ಕೆ ಕಾಲ್ನಡಿಗೆ ಮಾಡುವುದರಿಂದ ಕಾಲು ನೋವು ಆಗುತ್ತಿದೆ.
ನಲೇಶ ಮಹಾದೇವ ಗೌಡ (10ನೇ ತರಗತಿ ವಿದ್ಯಾರ್ಥಿ ಶಿರ್ವೆ):
ನಾನು ಎರಡುವರೆ ವರ್ಷಗಳಿಂದ ಹೈಸ್ಕೂಲ್ ಗೆ ಕಾಲ್ನಡಿಗೆ ಮೂಲಕ ಹೋಗುತ್ತಾ ಇದ್ದನೆ. ಇನ್ನು ತನಕ ನಮಗೆ ಯಾವುದೇ ಬಸ್ಸು ಸಂಚಾರ ಬಿಟ್ಟಿಲಾ.