ಕಾರವಾರ: ಕುಮಟಾ ತಾಲೂಕು ನ್ಯಾಯಾಲಯದಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಬಗೆಹರಿಸುವ ಉದ್ದೇಶದಿಂದ ಮಾರ್ಚ್ 12 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯಕ್, ಪ್ರಧಾನ ಸಿವಿಲ್ ನ್ಯಾಯಾಧೀಶ ನರೇಂದ್ರ ಬಿ ಆರ್ ಅವರನ್ನು ಒಳಗೊಂಡ ತಾಲೂಕು ಕಾನೂನು ಸೇವಾ ಸಮಿತಿ ತಿಳಿಸಿದೆ.
ಲೋಕ ಅದಾಲತ್ ನಲ್ಲಿ ದೌರ್ಜನ್ಯ, ನಷ್ಟ ಪರಿಹಾರ ಕುರಿತು ತಕರಾರುಗಳು, ಮೋಟಾರ್ ವೆಹಿಕಲ್,ಬ್ಯಾಂಕುಗಳ ಸಾಲ ವಸೂಲಿ, ಸಿವಿಲ್ ವ್ಯಾಜ್ಯಗಳು, ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ವಿವಿಧ ಬಗೆಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದ್ದು, ಕಕ್ಷಿದಾರರಿಗೆ ಖರ್ಚಿಲ್ಲದೇ ತ್ವರಿತವಾಗಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯು ತಿಳಿಸಿದೆ.