• Slide
    Slide
    Slide
    previous arrow
    next arrow
  • ಮಂಕಿಯ ಸೇಫ್ ಸ್ಟಾರ್ ಸೌಹಾರ್ಧ ಸಹಕಾರಿಯಲ್ಲಿ ಎರಡನೇ ವರ್ಷದ ಸಂಭ್ರಮಾಚರಣೆ

    300x250 AD

    ಹೊನ್ನಾವರ: ತಾಲೂಕಿನ ಸೇಫ್ ಸ್ಟಾರ್ ಸೌಹಾರ್ಧ ಸಹಕಾರಿಯ ಮಂಕಿ ಶಾಖೆಯ ಎರಡನೇ ವರ್ಷದ ಸಂಭ್ರಮಾಚರಣೆ ಜರುಗಿತು.

    ಮಂಕಿ ಶಾಖೆಯು ಯಶಸ್ವಿಯಾಗಿ ಎರಡು ವರ್ಷವನ್ನು ಪೂರೈಸಿದ್ದು, ಈ ಸಂಬಂದ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಶಾಖೆಯ ವ್ಯವಸ್ಥಾಪಕ ಜೀವನ್ ನಾಯ್ಕ, ಮಂಕಿ ಶಾಖೆಯು ಎರಡು ವರ್ಷದ ಅವಧಿಯಲ್ಲಿ ಒಟ್ಟೂ 2.22 ಕೋಟಿ ಠೇವಣಿ ಹಾಗೂ 2.28 ಕೋಟಿ ಸಾಲ ನೀಡಿಕೆ ಸೇರಿ ಹೀಗೆ ಒಟ್ಟೂ 4.50 ಕೋಟಿ ವ್ಯವಹಾರವನ್ನು ಹೊಂದಿದ್ದು, 2020-21 ನೇ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಶೇಕಡಾ 100% ರಷ್ಟು ಗುರಿ ಸಾಧಿಸಿದೆ. ಇದಕ್ಕೆ ಸಹಕಾರ ನೀಡಿದ ಸದಸ್ಯ ಗ್ರಾಹಕರನ್ನು ಹಾಗೂ ಸಿಬ್ಬಂದಿಗಳಿಗೆ ನಾನು ಆಭಾರಿಯಾಗಿದ್ದೇನೆ. ಎಂದರು. ಅಲ್ಲದೇ, ಶಾಖೆಯ ಅಭಿವೃದ್ದಿಗೆ ಮಾರ್ಗದರ್ಶನ ನೀಡುತ್ತಿರುವ ಸಹಕಾರಿಯ ಅಧ್ಯಕ್ಷರಾದ ಜಿ.ಜಿ. ಶಂಕರ ಅವರಿಗೆ ಅಭಿನಂದಿಸಿದರು.

    ಸಂಸ್ಥೆಯ ನಿರ್ದೇಶಕರಾದ ಪಿ.ವಿ.ಫನಾರ್ಂಡಿಸ್ ರವರು ಮಾತನಾಡಿ ನಮ್ಮ ಸಹಕಾರಿಯ ಮಂಕಿ ಶಾಖೆಯು 2020ರ ಕೊರೋನಾ ತೀರ್ವತೆಯ ಸಂದರ್ಭದಲ್ಲಿ ಆರಂಭಗೊಂಡರೂ ಸಹ ಅಭಿವೃದ್ದಿಯಲ್ಲಿ ಹಿಂದೆ ಬೀಳದೇ ಉತ್ತಮ ವ್ಯವಹಾರ ಹೊಂದಿರುವ ಶಾಖೆಯಾಗಿ ನಿಂತಿದೆ. ಹೀಗೆ ಸಹಕಾರಿಯ ಎಲ್ಲಾ ಶಾಖೆಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಕಾರಣ ಅಧ್ಯಕ್ಷರಾದ ಜಿ.ಜಿ. ಶಂಕರ ಅವರು ಮತ್ತು ಜನರಲ್ ಮ್ಯಾನೇಜರ್ ಮಹೇಶ್ ಶೆಟ್ಟಿಯವರು ಜೋಡೆತ್ತಿನಂತೆ ಸದಾ ಸಂಸ್ಥೆಯ ಅಭಿವೃದ್ದಿಗೆ ಚಿಂತನೆ ನಡೆಸುತ್ತಿರುವದರಿಂದ ಇದು ಸಾಧ್ಯವಾಗಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಜನರಲ್ ಮ್ಯಾನೇಜರ್ ಮಹೇಶ್ ಶೆಟ್ಟಿ ಮಾತನಾಡಿ ನಮ್ಮ ಸಹಕಾರಿಯು ಈಗಾಗಲೇ 12 ಶಾಖೆಗಳನ್ನು ಹೊಂದಿದ್ದು ಸಹಕಾರಿಯು ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಸಿಬ್ಬಂದಿಗಳ ಕಾರ್ಯದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ, ಎಂಡ್ರಾಯ್ಡ ಮಶಿನ್‍ಗಳ ಬಳಕೆಯನ್ನು ಸಹಕಾರಿಯಲ್ಲಿ ಹೆಚ್ಚಿಸಲಾಗಿದ್ದು, ಗ್ರಾಹಕರಿಗೆ ತ್ವರಿತ ಸೇವೇ ನೀಡುವಲ್ಲಿಯೂ ಸಹಕಾರಿಯಾಗಿದೆ ಎಂದರು. ಸಹಕಾರಿಯೂ ಆರಂಭಗೊಂಡಾಗಿನಿಂದಲೂ ನಮ್ಮ ಸಹಕಾರಿಯ ಅಧ್ಯಕ್ಷರಾದ ಜಿ.ಜಿ. ಶಂಕರ ಅವರು ಸಹಕಾರಿಯ ಅಭಿವ್ರದ್ದಿಗಾಗಿ ಸಹಕಾರಿಯ ಒಬ್ಬ ನೌಕರನಿಗಿಂತಲೂ ಹೆಚ್ಚಿನದಾಗಿ ಶ್ರಮ ವಹಿಸುತ್ತಾರೆ, ಸಂಸ್ಥೆಯ ಬಗೆಗಿನ ಅವರ ಗುರಿ, ಉದ್ದೇಶ ಉತ್ತಮವಾಗಿರುವುದರಿಂದ ನಮ್ಮ ಸಹಕಾರಿಯು ಇಂದು ಜಿಲ್ಲೆಯಲ್ಲಿ ಉತ್ತಮ ಸಹಕಾರಿಯಾಗಿ ಗುರುತಿಸಿಕೊಂಡಿದೆ ಎಂದರು.

    300x250 AD

    ಈ ಸಂದರ್ಭದಲ್ಲಿ ರಸ್ತೆ ಅಪಘಾತದಿಂದ ಮೃತರಾಗಿದ್ದ ಸಹಕಾರಿಯ ಮಂಕಿ ಶಾಖೆಯ ಸದಸ್ಯ ಗ್ರಾಹಕರಾಗಿದ್ದ ಬೇಬಿ ಪಾಂಡು ಮೊಗೇರ್ ಅವರಿಗೆ ಸಹಕಾರಿಯಿಂದ ಸಿಗುವ ಸೌಲಭ್ಯವಾದ ಜನತಾ ವೈಯಕ್ತಿಕ ಅಪಘಾತ ಪರಿಹಾರದ 1,00,000/- ಮೊತ್ತದ ಚೆಕ್ ಅನ್ನು ಮೃತರ ಮಗನಾದ ಮಹೇಶ ಪಾಂಡು ಮೊಗೇರ್ ಇವರಿಗೆ ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಶಾಖೆಯ ಕಟ್ಟಡ ಮಾಲೀಕರಾದ ವಾಸಂತಿ ನಾಯ್ಕ, “ಚೇತನ್ ಸಿನೇಮಾಟೋಗ್ರಫಿ” ಪೆÇ್ರಪ್ರೇಟರ್ ಚೇತನ್ ನಾಯ್ಕ,ಶಾಖೆಯ ಕೋ-ಆರ್ಡಿನೇಟರ್ ಮಮತಾ ನಾಯ್ಕ, ಸಿಬ್ಬಂದಿಗಳಾದ ವಿಶ್ವನಾಥ ಮೊಗೇರ್, ಅಮಿತ್ ಶೆಟ್ಟಿ, ಸುಶೀಲಾ ನಾಯ್ಕ, ಶ್ರೀನಿವಾಸ ನಾಯ್ಕ, ಗಣಪತಿ ನಾಯ್ಕ, ಹಾಗೂ ಶಾಖೆಯ ಸಧಸ್ಯ ಗ್ರಾಹಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top