ಹೊನ್ನಾವರ : ತಾಲೂಕಿನ ಹಳದಿಪುರ ಅಗ್ರಹಾರದ ಶ್ರೀ ಮಹಾಗಣಪತಿ ದೇವರ ರಥೋತ್ಸವದ ಅಂಗವಾಗಿ ನಡೆದ ಸ್ಥಬ್ದ ಚಿತ್ರಗಳ ಮೆರವಣಿಗೆ ಜನರನ್ನು ಸೆಳೆಯಿತು.
ಪ್ರತಿ ವರ್ಷ ರಥೋತ್ಸವದ ಅಂಗವಾಗಿ ರಾತ್ರಿ ಹಾಲಕ್ಕಿ ಸಮಾಜದವರಿಂದ ನಡೆಯುವ ಈ ಮೆರವಣಿಗೆಯು ಪೌರಾಣಿಕ ಸನ್ನಿವೇಶಗಳನ್ನು ಒಳಗೊಂಡಂತೆ ವಿಭಿನ್ನ ರೀತಿಯಲ್ಲಿ ಸ್ಥಬ್ದ ಚಿತ್ರಗಳು ಜನರನ್ನು ಮೈಮರೆಸುವಂತೆ ಮಾಡುತ್ತವೆ. ಒಂದೊಂದು ಸ್ಥಬ್ದ ಚಿತ್ರಗಳು ಕೂಡ ಜನರು ಆಕರ್ಷಿಸುವುದರ ಜೊತೆ ರೋಮಾಂಚನ ಗೊಳಿಸುತ್ತದೆ.
ಈ ಬಾರಿಯ ಮೆರವಣಿಗೆಯಲ್ಲಿ ಶೇಷನಾಗನ ಮೇಲೆ ಕುಳಿತಿರುವ ಶಿವ-ಪಾರ್ವತಿ ಚಂದ್ರನ ಮೇಲೆ ಆಸೀನರಾಗಿರುವ ಶಿವ ರಾಮಾಂಜನೇಯ ದುರ್ಗಾಮಾತೆಯ ಸುಬ್ರಹ್ಮಣ್ಯ ಕಾಳಿಮಾತೆಯ ಪೌರಾಣಿಕ ಸ್ತಬ್ಧ ಚಿತ್ರಗಳು ಜೊತೆಯಲ್ಲಿ ಯುದ್ಧದ ಸನ್ನಿವೇಶಗಳನ್ನು ಬಿಂಬಿಸುವ ಘಟನಾವಳಿಗಳು ಕರಾವಳಿಯ ಕಲೆ ಹಾಗೂ ಆಧುನಿಕ ಜಗತ್ತಿನ ವೈಭವವನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಜನರನ್ನು ಮೈಮರೆಯುವಂತೆ ಮಾಡಿತು.
ಜಾತ್ರೆಯಲ್ಲಿ ರಥೋತ್ಸವಕ್ಕೆ ಜಮಾವಣೆಯಾಗುವ ಜನರಿಗಿಂತ ಸ್ತಬ್ಧ ಚಿತ್ರಗಳು ಮೆರವಣಿಗೆಯನ್ನು ವೀಕ್ಷಿಸಲು ಬರುವವರ ಸಂಖ್ಯೆ ಅಧಿಕವಾಗಿರುತ್ತದೆ. ಈ ಬಾರಿಯೂ ಸಾವಿರಕ್ಕೂ ಅಧಿಕ ಜನ ಚಿತ್ರಗಳ ಮೆರವಣಿಗೆಯನ್ನು ಕಣ್ತುಂಬಿಸಿಕೊಂಡರು. ಯಾವುದೇ ಅವಘಡಗಳು ಸಂಭವಿಸದಂತೆ ಪೆÇೀಲಿಸ್ ಇಲಾಖೆ ಕರ್ತವ್ಯ ನಿರ್ವಹಿಸಿ ಉತ್ಸವ ಸಂಪನ್ನವಾಗಲು ಶ್ರಮಿಸಿದರು.