ಹೊನ್ನಾವರ :ತಾಲ್ಲೂಕಿನ ಅಳ್ಳಂಕಿಯ ಶ್ರೀ ವರಸಿದ್ಧಿ ಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೊತ್ಸವ ಕಾರ್ಯಕ್ರಮವು ವೇದಮೂರ್ತಿ ಕಟ್ಟೆ ಶಂಕರ ಪರಮೇಶ್ವರ ಭಟ್ಟ ಆಚಾರ್ಯತ್ವದಲ್ಲಿ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.ಮಹಾ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಸಂಜೆ ನಡೆದ ದಾಸವಾಣಿ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ಥಾನಿ ಗಾಯಕ ರಾಘವೇಂದ್ರ ಭಟ್ ಸಾಗರ್ ಅವರಹಾಡುಗಾರಿಕೆ ಮತ್ತು ವಿದ್ವಾನ್ ಎನ್. ಜಿ. ಹೆಗಡೆಯವರ ತಬಲಾ ಮತ್ತು ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ರವರ ಪಖಾವತ್ ಮತ್ತು ಹರಿಶ್ಚಂದ್ರ ನಾಯ್ಕ ಇವರ ಸಂವಾಧಿನಿ ಯಲ್ಲಿ ನಡೆದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀ ಆರ್. ಎಸ್. ರಾಯ್ಕರ ಉಪ್ಪೋಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಳ್ಳಂಕಿಯ ಶ್ರೀವರಸಿಧ್ಧಿಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೊತ್ಸವ ಸಂದರ್ಭದಲ್ಲಿ ಪ್ರತಿ ವರ್ಷವೂ ದೇವರಿಗೆ ಪ್ರಿಯವಾದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುವದು ಈಗಿನ ಪೀಳಿಗೆಗೆ ಧಾರ್ಮಿಕ ಸಂಸ್ಕಾರವನ್ನು ನೀಡಿದಂತಾಗುತ್ತದೆ. ಭಾರತೀಯ ಹಿಂದು ಸಂಸ್ಕøತಿಯ ಪರಿಚಯ ಮಾಡಿಕೊಟ್ಟಂತಾಗುತ್ತದೆ ಎಂದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಅಂಕೊಲೇಕರ, ನಾಮದೇವ ಅಂಕೊಲೇಕರ, ಮನೋಹರ ಅಂಕೊಲೇಕರ, ರಘುನಾಥ್ ಸೋಡನಕರ್, ಅಶೋಕ ಬಾಂದೇಕರ, ರಾಜೇಂದ್ರ ಪೆಡ್ನೆಕರ, ಮಾಬ್ಲೇಶ್ವರ ಅಂಕೊಲೇಕರ ಮುಂತಾದ ಪ್ರಮುಖರು ಉಪಸ್ಥಿತರಿದ್ದರು. ಕೊನೆಯಲ್ಲಿ ಶಿರಸಿಯ ರಾಜು ಸೊಂದಾ ಅವರಿಂದ ನಗು ನಲಿ ಹಾಸ್ಯಕಾರ್ಯಕ್ರಮ ನಡೆಯಿತು.