ಭಟ್ಕಳ: 1400 ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಬುರ್ಕಾ ಮತ್ತು ಹಿಜಾಬ್ ಧರಿಸುವ ಪದ್ದತಿ ಜಾರಿಯಲ್ಲಿತ್ತು. ಈಗ ಕರ್ನಾಟಕದಲ್ಲಿ ಹಜಾಬ್ ಧರಿಸಿರುವ ವಿದ್ಯಾರ್ಥಿಗಳಿಗೆ ಸರಕಾರಿ ಹೈಸ್ಕೂಲ್ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದೆಂದು ಶಾಲಾ ಮುಖ್ಯಸ್ಥರು ಕಿರುಕುಳ ಕೊಡುತ್ತಿದ್ದಾರೆ. ಇದು ಖಂಡನೀಯ ಎಂದು ಮುಸ್ಲೀಂ ಮಜ್ಲೀಸ್ ಓ ತಂಜೀಮ್ ಸಂಸ್ಥೆಯ ಮಾದ್ಯಮ ಪ್ರಮುಖ ಹನೀಫ ಶಬಾಬ್ ಹೇಳಿದರು.
ಅವರು ತಂಜೀಮ್ ಕಚೇರಿಯಲ್ಲಿ ಗುರುವಾರ ಸಂಜೆ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನಮಗೆ ನಮ್ಮ ಸಂವಿಧಾನ ಮತ್ತು ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು.ನಮಗೆ ಸಂವಿದಾನವೇ ಈ ಹಕ್ಕನ್ನು ನೀಡಿದ್ದು ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಕೊನೆಯತನಕ ಹೋರಾಟ ಮಾಡುತ್ತೇವೆ ಎಂದರು.
ಭಟ್ಕಳದಲ್ಲಿಯೂ ಹಿಜಾಬ್ ಬಗ್ಗೆ ಸರ್ಪನಕಟ್ಟೆ ಸರಕಾರಿ ಕಾಲೇಜಿನಲ್ಲಿ ಅಪಸ್ವರ ಕೇಳಿಬಂದಿದ್ದು ನಮ್ಮ ಮುಸ್ಲೀಂ ವಿದ್ಯಾರ್ಥಿಗಳಿಗೆ ಕೋರ್ಟ ಆಧೇಶ ಬರುವರೆಗೆ ಮನೆಯಲ್ಲಿಯೆ ಇರುವಂತ ಸೂಚಿಸಿದ್ದೇವೆ ಎಂದರಲ್ಲದೇ ಸರಕಾರದ ಒಂದೊಂದು ಇಲಾಖೆಯ ಸಚಿವರೂ ಹಿಜಾಬ್ ಬಗ್ಗೆ ವಿಬಿನ್ನ ಹೇಳಿಕೆಗಳನ್ನು ಕೊಡುತ್ತಿದ್ದಾರೆ .ಕೆಲವು ಸಚಿವರು ಕಾಲೇಜು ವಿದ್ಯಾರ್ಥಿಗಳಿಗೆ ಇದು ಸಂಭಂದಿಸುವುದಿಲ್ಲ ಎನ್ನುತ್ತಾರೆ.ಸಚಿವರಲ್ಲಿಯೆ ಗೊಂದಲವಿದೆ ಎಂದರಲ್ಲದೇ ನಮ್ಮ ಸಮುದಾಯದ ಎಲ್ಲರೂ ಕೋರ್ಟ ಆದೇಶ ಬರುವ ತನಕ ಶಾಂತತೆಯಿಂದ ಇರಬೇಕು ಎಂದರು .
ಪತ್ರಿಕಾಗೋಷ್ಟಿಯಲ್ಲಿ ಇಮ್ರಾನ ಲಂಕಾ, ತಂಜೀಂ ನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಮುಸ್ಲೀಂ ಯುಥ್ ಪೆಡರೇಷನ್ ಅದ್ಯಕ್ಷ ಅಜೀಜುರೆಹಮಾನ್ ನದ್ವಿಮ ಜೆಲಾನಿ ಶಾಭಂದ್ರಿ ಮತ್ತಿತರರು ಇದ್ದರು.