• Slide
  Slide
  Slide
  previous arrow
  next arrow
 • ಮಿರ್ಜಾನ್ ನಲ್ಲಿ ಸ್ಕಿಲ್ ಇಂಡಿಯಾ ಕಾರ್ಯಾಗಾರ ಉದ್ಘಾಟನೆ

  300x250 AD

  ಮಿರ್ಜಾನ : ಆತ್ಮ ನಿರ್ಭರ್ ಭಾರತವನ್ನು ಸ್ವಾವಲಂಭಿ ರಾಷ್ಟ್ರವನ್ನಾಗಿಸಿ ಯುವಜನತೆಯನ್ನು ಉದ್ಯೋಗದತ್ತ ಕೊಂಡೊಯುವ ಪ್ರಾಧಾನಿ ನರೇಂದ್ರ ಮೋದಿಯವರ ಕನಸಿನ ಸ್ಕಿಲ್ ಇಂಡಿಯಾ ಕಾರ್ಯಾಗಾರ ಕಾರ್ಯಕ್ರಮವನ್ನು ಜನತಾ ವಿದ್ಯಾಲಯ ಮಿರ್ಜಾನ ಕೋಡ್ಕಣಿ ಸಭಾಗೃಹದಲ್ಲಿ ಹೆಲ್ಪ್ ಸೊಸೈಟಿ, ಮಿರ್ಜಾನ ಇವರು ಆಯೋಜಿಸಿದ್ದರು.

  ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಿರ್ಜಾನ ಗ್ರಾ.ಪಂ. ಅಧ್ಯಕ್ಷ ಪರಮೇಶ್ವರ ಪಟಗಾರ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ನಿರುದ್ಯೋಗಿ ಯುವಕರು, ಯುವತಿಯರು ಇದರ ಪ್ರಯೋಜನ ಪಡೆದು ಕೊಳ್ಳಬೇಕೆಂದರು.

  ಪತ್ರಕರ್ತ ಜಿ.ಡಿ.ಶಾನಭಾಗ ದೇಶದ 130 ಕೋಟಿ ಜನಸಂಖ್ಯೆ ಹೊಂದಿದ ಭಾರತ ದೇಶ, ವಿಶ್ವದಲ್ಲೇ ಶೇ 60 ರಷ್ಟು ಯುವಜನತೆ ಹೊಂದಿದೆ ದೇಶದ ಪ್ರಗತಿಗೆ ಯುವಶಕ್ತಿಯೇ ಪ್ರಮುಖವಾಗಿದೆ. ಪ್ರತಿಯೊಬ್ಬರಲ್ಲಿಯೂ ಕೌಶಲ್ಯವಿದ್ದು ಅದನ್ನು ಹೊರತೆಗೆದು ಅಭಿವೃದ್ದಿ ಪಥದತ್ತ ಕೊಂಡೊಯ್ಯುವುದೇ ಭಾರತ ಸರಕಾರದ ದ್ಯೇಯವಾಗಿದ್ದು ಇದು ಯುವ ಜನತೆಯನ್ನು ಉದ್ಯೋಗತದ್ದ ಕೊಂಡೊಯಲು ಸಹಕಾರಿಯಾಗಿದೆ ಎಂದರು.

  ಅಧ್ಯಕ್ಷತೆ ವಹಿಸಿದ ಹೆಲ್ಪ್ ಸೊಸೈಟಿಯ ಅಧ್ಯಕರಾದ ಮಾರ್ಶಲ ಫರ್ನಾಂಡಿಸ್ ನಮ್ಮ ಮುಂದಿನ ದಾರಿ ಸ್ಥಳೀಯದಲ್ಲಿಯೇ ಅಡಕವಾಗಿದೆ, ಸ್ಥಳೀಯ ತಯಾರಿಕೆ, ಸ್ಥಳೀಯ ಮಾರುಕಟ್ಟೆಗಳು ಸ್ಥಳೀಯ ಸರಬರಾಜು ಸರಪಳಿಯವನ್ನು ಕೇವಲ ಒಂದು ಅಗತ್ಯವಲ್ಲ ಬದಲಿಗೆ ಅದೊಂದು ಜವಾಬ್ದಾರಿಯಾಗಿದೆ ಎಂದರು.

  300x250 AD

  ಇದೇ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿಯ ಕಾರ್ಯದರ್ಶಿ ವಿವೇಕ ನೊರೋನಾ ಯುವಜನರಿಗಾಗಿ ಬ್ಯಾಂಕಿನ ನೆರವಿನಿಂದ ಅನೇಕ ಯೋಜನೆಗಳಿದ್ದು ಇದರ ಕುರಿತಂತೆ ಹೆಚ್ಚಿನ ಮಾಹಿತಿ ಪಡೆಯಲು ಮಿರ್ಜಾನ ಕಛೇರಿಗೆ ಹಾಗೂ 8147567688 ಈ ದೂರವಾಣಿಗೆ ಸಂಪರ್ಕಿಸಲು ಕೋರಿದರು.

  ಸರಿಸುಮಾರು 60 ರಷ್ಟು ಯುವಜನತೆ ಸೇರಿದ್ದು ವಿಶೇಷತೆಯಾಗಿತ್ತು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ದತ್ತಾತ್ರೇಯ ಪಂಡಿತ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ, ವಂದನಾರ್ಪಣೆ ಗೈದರು.

  Share This
  300x250 AD
  300x250 AD
  300x250 AD
  Leaderboard Ad
  Back to top