ಶಿರಸಿ : ಇಲ್ಲಿನ ತೋಟಗಾರ್ಸ್ ಗ್ರ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಹಾಗೂ ಟಿ ಆರ್ ಸಿ ಶಿರಸಿ ಸಹಯೋಗದಲ್ಲಿ ಶಿರಸಿ ತೋಟಗಾರಿಕಾ ಇಲಾಖೆ ಹಾಗೂ ಸ್ಕೊಡ್‍ವೆಸ್ ಸಂಸ್ಥೆಯ ಸಹಕಾರದೊಂದಿಗೆ ಹೈನುಗಾರಿಕೆಯಲ್ಲಿ ರಸಮೇವು (ಸೈಲೆಜ್) ಬಳಕೆ ಮತ್ತು ಮಹತ್ವ ಮಾಹಿತಿ ಕಾರ್ಯಾಗಾರವು ಫೆ.19ರಂದು ಬೆಳಿಗ್ಗೆ 10 ಗಂಟೆಗೆ ಟಿ ಆರ್ ಸಿ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ಅಧ್ಯಕ್ಷ ಶ್ರೀಧರ ರಾಮಕೃಷ್ಣ ಹೆಗಡೆ, ಕಡವೆ ವಹಿಸುವರು. ಧಾರವಾಡ ಹಾಲು ಒಕ್ಕೂಟ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಟಿ ಆರ್ ಸಿ ಅಧ್ಯಕ್ಷರು, ಟಿಎಸ್‍ಎಸ್ ಕಾರ್ಯಾಧ್ಯಕ್ಷರು, ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಖ್ಯಾತ ಜಾನುವಾರು ವೈದ್ಯರಾದ ಡಾ. ಪಿ.ಎಸ್. ಹೆಗಡೆ, ಪ್ರಗತಿಪರ ಹೈನೋದ್ಯಮ ಕೃಷಿಕರಾದ ರಾಜೇಶ್ವರಿ ಹೆಗಡೆ, ಗೋಳಿಕೊಪ್ಪ, ಜವಳಗುಂಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಲೀಲಾವತಿ ದೇವೇಂದ್ರ ಶೆಟ್ಟಿ ಪಾಲ್ಗೊಳ್ಳುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಗದಗದ ಪಶು ವೈದ್ಯಕೀಯ ಕಾಲೇಜ್‍ನ ಪ್ರಾಧ್ಯಾಪಕರು ಹಾಗೂ ಪಶು ಪೋಷಣೆ ವಿಭಾಗದ ಮುಖ್ಯಸ್ಥರಾದ ಡಾ. ಟಿ.ತಿರುಮಲೇಶ್ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.