ಯಲ್ಲಾಪುರ: ಪಟ್ಟಣದ ಅಂಬೇಡ್ಕರ್ ನಗರದ ಸಭಾಭವನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಘದಿಂದ ಸಂತ ಶಿರೋಮಣಿ ಶ್ರೀ ಗುರು ರವಿದಾಸ್ ಅವರ 645ನೇ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಸಮಾಜದ ಮುಖಂಡ ಸುಭಾಷ ಕಾನಡೆ ಸಂತ ಶಿರೋಮಣಿ ಶ್ರೀ ಗುರು ರವಿದಾಸ್ ಅವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ್ ಮಾತನಾಡಿ, ಸಂತ ರವಿದಾಸ್ ಜೀವನ ಅವರ ಆದರ್ಶದ ನಡೆ ಅನುಕರಣೀಯ ಎಂದರು.
ಪ.ಪಂ ಸದಸ್ಯ ರವಿ ಪಾಟಣಕರ್ ಉಪಸ್ಥಿತರಿದ್ದರು. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಸಂತೋಷ ಪಾಟಣಕರ ಸ್ವಾಗತಿಸಿ ನಿರೂಪಿಸಿದರು.