• Slide
    Slide
    Slide
    previous arrow
    next arrow
  • 9-4 ವರ್ಷದೊಳಗಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿದ ಕೇಂದ್ರ

    300x250 AD

    ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ  ಒಂಬತ್ತು ತಿಂಗಳಿಂದ ನಾಲ್ಕು ವರ್ಷದೊಳಗಿನ ಮಕ್ಕಳು ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುವಾಗ  ಹೆಲ್ಮೆಟ್ ಮತ್ತು ಮಗುವು ಬೀಳದಂತೆ ತಡೆಯುವ ರಕ್ಷಾಕವಚ ಧರಿಸುವುದನ್ನು ಕಡ್ಡಾಯಗೊಳಿಸಿದೆ.

    ಕೇಂದ್ರ ಮೋಟಾರು ವಾಹನಗಳ (ಎರಡನೇ ತಿದ್ದುಪಡಿ) ನಿಯಮಗಳು, 2022  ಪ್ರಕಟವಾದ ದಿನಾಂಕದಿಂದ ಒಂದು ವರ್ಷದ ನಂತರ ಈ ನಿಯಮಗಳು ಜಾರಿಗೆ ಬರುತ್ತವೆ.

    “ಮೋಟಾರು ವಾಹನ ಕಾಯಿದೆಯ ಸೆಕ್ಷನ್ 129 ರ ಅಡಿಯಲ್ಲಿ ಇದನ್ನು ಸೂಚಿಸಲಾಗಿದ್ದು, ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸುರಕ್ಷತೆಗಾಗಿ ಕ್ರಮಗಳನ್ನು ಇದು ವಿವರಿಸಿದೆ. ಇದರನ್ವಯ ಈ ಮಕ್ಕಳು ಸವಾರಿ ಮಾಡುವಾಗ ಹೆಲ್ಮೆಟ್‌ ಧಾರಣೆ ಮತ್ತು ರಕ್ಷಾ ಕವಚ ಕಡ್ಡಾಯವಾಗಿದೆ” ಎಂದು ಸಚಿವಾಲಯ ತಿಳಿಸಿದೆ.

    300x250 AD

    ಅಲ್ಲದೇ ದ್ವಿಚಕ್ರ ವಾಹನಗಳನ್ನು ಗಂಟೆಗೆ 40 ಕಿಮೀಗಿಂತ ಹೆಚ್ಚು ವೇಗದಲ್ಲಿ ಓಡಿಸುವಂತಿಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.

    ರಕ್ಷಾ ಕವಚ ಬೆಲ್ಟ್‌ ಹೊಂದಿರುವ ಎದೆಗೆ ಧರಿಸುವ ಕವಚ, ಇದನ್ನು ಬೈಕ್‌ ಚಾಲನೆ ಮಾಡುವ ವ್ಯಕ್ತಿಯ ಭುಜಕ್ಕೆ ಜೋಡಿಸಲಾಗುತ್ತದೆ. ಮಗುವಿನ ದೇಹ ಚಾಲಕನಿಗೆ ಅಂಟಿದ ಮಾದರಿಯಲ್ಲಿಡಲು ಇದು ಸಹಾಯ ಮಾಡುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top