ಬೆಂಗಳೂರು: ರಾಜ್ಯದ ಹಿಂದೂ ದೇವಾಲಯಗಳನ್ನು ಸರಕಾರದ ಆಡಳಿತದಿಂದ ಮುಕ್ತಗೊಳಿಸುವ ಕ್ರಮ ಸ್ವಾಗತಾರ್ಹವಾಗಿದ್ದು, ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾತನಾಡಿದ ಅವರು, ಹಿಂದೂ ದೇವಾಲಯಗಳನ್ನು ಸರಕಾರದ ಆಡಳಿತದಿಂದ ಮುಕ್ತಗೊಳಿಸುವ ಮತ್ತು ಎಗ್ರೇಡ್ ದೇವಾಲಯಗಳಲ್ಲಿ ಗೋಶಾಲೆಗಳನ್ನು ತೆರೆಯಲು ಆದೇಶ ಹೊರಡಿಸುವಂತೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ಸರ್ಕಾರದ ಆಡಳಿತದಿಂದ ಮುಕ್ತಿಗೊಳಿಸುವ ಕ್ರಮ ಸ್ವಾಗತಾರ್ಹವಾಗಿದ್ದು , ಎಲ್ಲಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಕ್ರಮವಾಗಿದೆ. ಆದರೆ ಹಿಂದೂ ದೇವಸ್ಥಾನಗಳನ್ನು ಮುಕ್ತಿಗೊಳಿಸುವ ಸಂದರ್ಭದಲ್ಲಿ ಎ ಗ್ರೇಡ್ ದೇವಸ್ಥಾನಗಳಲ್ಲಿ ಹೆಚ್ಚಿನ ರೀತಿಯ ಅನುದಾನ ಸಂಗ್ರಹವಾಗಲಿದೆ. ಈ ಅನುದಾನದಲ್ಲಿ ಎ ಗ್ರೇಡ್ ದೇವಸ್ಥಾನ ಆಡಳಿತ ಮಂಡಳಿಗಳ ವತಿಯಿಂದಲೇ ಗೋ ಶಾಲೆಗಳನ್ನು ತೆರೆಯಲು ಆದೇಶದಲ್ಲಿ ಷರತ್ತು ವಿಧಿಸಿದ್ದಲ್ಲಿ ಕಳ್ಳತನ ಮೂಲಕ , ಗೋ ಸಾಗಾಟಕ್ಕೆ ಕಡಿವಾಣ ಬೀಳಲಿದೆ. ಇದರಿಂದ ಗೋ ಮಾತೆಗೆ ರಕ್ಷಣೆ ಕೊಟ್ಟಂತಾಗುತ್ತದೆ, ಇದಲ್ಲದೇ ಗೋವಿನ ಸಂತತಿ ಪ್ರಮಾಣ ಕೂಡ ಹೆಚ್ಚಾಗಲಿದ್ದು , ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಷರತ್ತು ವಿಧಿಸಿ ಮುಕ್ತಿಗೊಳಿಸಲು ಆದೇಶ ನೀಡಲು ಶಿಫಾರಸ್ಸು ಮಾಡುವಂತೆ ಮನವಿ ಮಾಡಿಕೊಂಡರು.