ಶಿರಸಿ: ಉಪ್ಪಿ ಎಂಟರ್ಟೈನರ್ ಹಾಗೂ ಟಿ.ಎಸ್.ಎಸ್ ಶಿರಸಿ ಇವರ ಸಹಭಾಗಿತ್ವದಲ್ಲಿ ಚಾಲಿ ಅಡಿಕೆ ಸುಲಿಯುವ ಸ್ಪರ್ಧೆಯನ್ನು ಫೆ.20 ರಂದು ಮಧ್ಯಾಹ್ನ 3 ರಿಂದ 5.30ವರೆಗೆ ಶಿರಸಿಯ ಟಿ.ಎಸ್.ಎಸ್ ಅಡಿಕೆ ವ್ಯಾಪಾರಿ ಅಂಗಳದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದಿಗಂತ್, ಐಂದ್ರಿತಾ ರೈ ಹಾಗೂ ರಂಜನಿ ರಾಘವನ್ ಇವರ ಉಪಸ್ಥಿತಿ ಇರಲಿದೆ.
ಸ್ಪರ್ಧೆಗೆ ಭಾಗವಹಿಸುವವರು ಮೊದಲೇ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಈ ಸ್ಪರ್ಧೆಯಲ್ಲಿ ಮೊದಲ 200 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಸ್ಪರ್ಧೆಯ ವಿವರ ಮತ್ತು ನೋಂದಣಿಗಾಗಿ (9449400020) ಸಂಪರ್ಕಿಸಬಹುದಾಗಿದೆ.
ಸ್ಪರ್ಧೆಯ ನಂತರ ನಿರ್ಮಾಪಕ ಬಿ.ಜಿ.ಮಂಜುನಾಥ್ ನಿರ್ಮಾಣದಲ್ಲಿ ವಿನಾಯಕ್ ಕೋಡ್ಸರ ಇವರ ನಿರ್ದೇಶನದೊಂದಿಗೆ ದಿಗಂತ್, ಐಂದ್ರಿತಾ ರೈ ಹಾಗೂ ರಂಜಿನಿ ರಾಘವನ್ ಅಭಿನಯಿಸಿರುವ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಬಿಡುಗಡೆಗೊಳ್ಳಲಿದೆ.