ಕಾರವಾರ: ಜಿಲ್ಲೆಯಲ್ಲಿ ಅತೀವೃಷ್ಟಿಯಿಂದ ಆದಂತಹ ಬೆಳೆಹಾನಿಗೆ ಸರ್ಕಾರದಿಂದ ಪರಿಹಾರ ತಂತ್ರಾಂಶದ ಮುಖಾಂತರ ಪರಿಹಾರ ಧನವನ್ನು ಬಿಡುಗಡೆ ಮಾಡಿದ್ದು, ಫಲಾನುಭವಿಗಳಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಆದರೂ 352 ರೈತರ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ ಮಾಹಿತಿಯು ಮ್ಯಾಪ್ ಸಿಡಿಂಗ ಆಗದೇ ಇರುವದರಿಂದ ಪರಿಹಾರ ಧನ ಜಮೆಯಾಗಿರುವದಿಲ್ಲ.
ಕಾರಣ ಅರ್ಹ ರೈತರು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ ಮಾಹಿತಿಯನ್ನು ಶೀಘ್ರದಲ್ಲಿ map\seeding ಮಾಡಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಸಲ್ಲಿಸತಕ್ಕದ್ದು.
ಸರ್ಕಾರದಿಂದ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ನೀಡಲಾಗುವ ವಿವಿಧ ಮಾಸಿಕ ಪಿಂಚಣಿಗಳಿಗೆ ಸಂಬಂಧಿಸಿದಂತೆ, ಈಗಾಗಲೇ ಪಡೆಯುತಿದ್ದ ಪಿಂಚಣಿಯು ಸ್ಥಗಿತಗೊಂಡಿದ್ದಲ್ಲಿ ಅಥವಾ ಪಿಂಚಣಿ ಮಂಜೂರಾಗಿ ಇದುವರೆಗೂ ಹಣ ಜಮೆಯಾಗದಿದ್ದಲ್ಲಿ,ಕೋವಿಡ್ ಮರಣ ಸಂಬಂಧಿತ ಪರಿಹಾರಧನವು ಬ್ಯಾಂಕ್ ಖಾತೆಗೆ ಜಮೆಯಾಗದಿದ್ದಲ್ಲಿ, ಕೂಡಲೇ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ ಮಾಹಿತಿಯನ್ನು map\seeding ಮಾಡಿಸಿಕೊಳ್ಳತಕ್ಕದ್ದು. ಹಾಗೂ ವಿವರಗಳನ್ನು ಸಂಬಂಧಿಸಿದ ತಹಶೀಲ್ದಾರ ಕಾರ್ಯಾಲಯಕ್ಕೆ ಪ್ರತಿಯನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.