ಕಾರವಾರ: ಕೋವಿಡ್‍ನಿಂದ ಮರಣಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಕೇಂದ್ರ ಸರಕಾರದಿಂದ 50 ಸಾವಿರ ಹಾಗೂ ರಾಜ್ಯ ಸರಕಾರದ 1 ಲಕ್ಷ ಪರಿಹಾರ ಧನ ಪಾವತಿಸಲು ಸರಕಾರದ ನಿರ್ದೇಶನವಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ನಿಂದಾಗಿ ಮರಣಹೊಂದಿದ ಕುಟುಂಬದ ಸದಸ್ಯರು ಇದುವರೆಗೂ ಸರ್ಕಾರದ ಸಹಾಯಧನ ಪಡೆಯದೇ ಇರುವವರು ಒಂದು ವಾರದೊಳಗಾಗಿ ಸಂಬಂಧಿಸಿದ ತಹಶೀಲ್ದಾರ್ ಕಛೇರಿಗೆ ತಪ್ಪದೇ ಅರ್ಜಿ ಸಲ್ಲಿಸಬೇಕು ಹಾಗೂ ಈ ಹಿಂದೆ ಪರಿಹಾರಧನಕ್ಕಾಗಿ ಅರ್ಜಿ ಸಲ್ಲಿಸುವವರು ಪುನಃ ಅರ್ಜಿ ಸಲ್ಲಿಸುವ ಅವಕಾಶವಿರುವದಿಲ್ಲವೆಂದು ಜಿಲ್ಲಾಡಳಿತ ಪ್ರಕಟಣೆಯು ತಿಳಿಸಿದೆ.
ಅರ್ಜಿಯನ್ನು ಸಲ್ಲಿಸುವವರು ನಮೂನೆ 1ರೊಂದಿಗೆ ಅರ್ಜಿ, ನಮೂನೆ 2ರಲ್ಲಿ ಸ್ವಯಂ ಘೋಷಣಾ ಪತ್ರ, ನಮೂನೆ 3ರಲ್ಲಿ ನಿರಾಕ್ಷೇಪಣಾ ಪತ್ರ, ನಮೂನೆ 4ರಲ್ಲಿ ಗ್ರಾಮಲೆಕ್ಕಾಧಿಕಾರಿಗಳ ವಿಚಾರಣಾ ವರದಿ, ಕೋವಿಡ್ ಪಾಸಿಟಿವ್ ವರದಿ, ಮರಣ ಹೊಂದಿದ ಕುರಿತು ವೈದ್ಯಾಧಿಕಾರಿಗಳು ನೀಡಿದ ಪತ್ರ, ಮರಣ ಪ್ರಮಾಣ ಪತ್ರ, ಮೃತರ ಆಧಾರ ಕಾರ್ಡ,ರೇಷನ್ ಕಾರ್ಡ ಪ್ರತಿ, ಹಾಗೂ ಅರ್ಜಿದಾರರ ಆಧಾರ ಕಾರ್ಡ, ರೇಷನ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ತಪ್ಪದೇ ಸಲ್ಲಿಸಬೇಕಾಗಿರುತ್ತದೆ.