ಶಿರಸಿ: ಭಾರತ ಸೇವಾದಳ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಉಪಾಧ್ಯಾಯರುಗಳ ಕಾರ್ಯಾಗಾರ ಬೆಳಿಗ್ಗೆ 9.00 ಗಂಟೆಗೆ ಧ್ವಜವಂದನೆ ಕಾರ್ಯಕ್ರಮವನ್ನು ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಂ.ಜಿ ನಾಯ್ಕ ನೆರವೇರಿಸಿ ಶುಭ ಕೋರಿದರು.
ನಂತರ ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಕೆ. ಎನ್. ಹೊಸ್ಮನಿ ಸರ್ ಉದ್ಘಾಟಕರಾಗಿ ಆಗಮಿಸಿ ಮಾತನಾಡುತ್ತ ಇಂದಿನ ದಿನದಲ್ಲಿ ಸೇವಾದಳದ ಅವಶ್ಯಕತೆ ಬಗ್ಗೆ, ನಿತ್ಯ ಜೀವನದಲ್ಲಿ ಶಿಸ್ತು, ಸಹನೆ, ತ್ಯಾಗ ಮನೋಭಾವನೆ ರಾಷ್ಟ್ರೀಯ ಭಾವೈಕ್ಯತೆ ಕುರಿತು ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ರಾಮಚಂದ್ರ ಹೆಗಡೆ, ಜಿಲ್ಲಾ ಸಂಘಟಕರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷರಾಗಿ ವಿ.ಎಸ್.ನಾಯ್ಕ, ಜಿಲ್ಲಾ ಅಧ್ಯಕ್ಷರು ಮಾತನಾಡಿ ಕಾರ್ಯಾಗಾರದ ಅನುಷ್ಠಾನ ಯಶಸ್ವಿಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಜಿಲ್ಲಾ ಸಮಿತಿ ಸದಸ್ಯರಾದ ಅಶೋಕ ಭಜಂತ್ರಿ ಶಿಕ್ಷಕರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿ.ಎಸ್.ಐ. ರಾಜಕುಮಾರ .ಎಸ್. ಇವರು ಪೋಸ್ಕೊ ಕಾಯ್ದೆ ಮತ್ತು ಮಕ್ಕಳ ಸುರಕ್ಷತಾ ಕ್ರಮದ ಬಗ್ಗೆ ತಿಳಿಸಿದರು ಶಿಕ್ಷಕರಿಗೆ ಮಾಸ್ಕ ಹಾಗೂ ಸ್ಯಾನಿಟೈಜರ್‍ಗಳನ್ನು ವಿತರಿಸಲಾಯಿತು. ಕರೋನ ಬಗ್ಗೆ ಜಾಗೃತಿ ತಿಳಿಸಲಾಯಿತು.
ಕುಮಾರ ನಾಯ್ಕ ಹಿರಿಯ ಕಾರ್ಯಕರ್ತರು ಎಲ್ಲರನ್ನು ಸ್ವಾಗತಿಸಿದರೆ, ಶ್ರೀಮತಿ ಸಾವಿತ್ರಿ ಎನ್. ಭಟ್ಟ ವಂದನಾರ್ಪಣೆ ಮಾಡಿದರು. ಎಂ.ಎನ್. ಹೆಗಡೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.